ಅಮೆರಿಕಾದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತಾ ನೇಮಕ
ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತಾ ಅವರು ನೇಮಕಗೊಂಡಿದ್ದು, ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ನ್ಯೂಯಾರ್ಕ್: ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತಾ ಅವರು ನೇಮಕಗೊಂಡಿದ್ದು, ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಈ ಹುದ್ದೆಗೆ ನೇಮಕಗೊಂಡ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ವನಿತಾ ಅವರು ಪಾತ್ರರಾಗಿದ್ದಾರೆ.
ಸೆನೆಟ್‌ನಲ್ಲಿ ಬುಧವಾರ ನಡೆದ ಮತದಾನದಲ್ಲಿ ರಿಪಬ್ಲಿಕನ್ ಸೆನೆಟ್ ಸದಸ್ಯೆ ಲಿಸಾ ಮಾರ್ಕೋವ್‌ಸ್ಕಿ ಅವರು ತಮ್ಮ ಪಕ್ಷದ ನಿಲುವಿನಿಂದ ಹೊರಬಂದು ವನಿತಾ ಗುಪ್ತಾ (46) ಅವರಿಗೆ ಮತ ಚಲಾಯಿಸಿದರು. ಹೀಗಾಗಿ 51–49 ಮತಗಳ ಅಂತರದಿಂದ ಅವರು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು.
ಸೆನೆಟ್‌ನಲ್ಲಿ ಉಭಯ ಪಕ್ಷಗಳೂ ತಲಾ 50 ಸ್ಥಾನಗಳನ್ನು ಹೊಂದಿವೆ. ಮತದಾನ ವೇಳೆ ಟೈ ಆದರೆ ಮತ ಚಲಾಯಿಸುವ ಸಲುವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸಹ ಸೆನೆಟ್‌ನಲ್ಲಿ ಹಾಜರಿದ್ದರು.
ವನಿತಾ ಗುಪ್ತ ಅವರನ್ನು ಅಭಿನಂದಿಸಿರುವ ಅಧ್ಯಕ್ಷ ಜೋ ಬೈಡನ್, ‘ಜನಾಂಗೀಯ ಸಮಾನತೆ ಮತ್ತು ನ್ಯಾಯ ಕ್ಷೇತ್ರದಲ್ಲಿ ಅರ್ಪಣೆಯಿಂದ ಕೆಲಸ ಮಾಡುವ ಹೊಣೆಗಾರಿಕೆ ವನಿತಾ ಗುಪ್ತ ಮತ್ತು ಕ್ರಿಸ್ಟಿನ್ ಕ್ಲರ್ಕ್ ಅವರಿಗೆ ದೊರೆತಿದೆ. ಸೆನೆಟ್ ಇವರಿಗೆ ಸಹಕಾರ ನೀಡಬೇಕು’ ಎಂದು ಕೇಳಿಕೊಂಡಿದ್ದಾರೆ.
ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್ ಹುದ್ದೆ ಅತ್ಯಂತ ಪ್ರತಿಷ್ಠಿತವಾಗಿದ್ದು, ಸಹ ಅಟಾರ್ನಿ ಜನರಲ್ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ 3ನೇ ಅತಿ ಪ್ರಮುಖ ಹುದ್ದೆಯಾಗಿದೆ.
ವನಿತಾ ಗುಪ್ತಾ ತಮ್ಮ ವೃತ್ತಿ ಜೀವನವನ್ನು ಎನ್ಎಎಸಿಪಿ ಕಾನೂನು ರಕ್ಷಣಾ ನಿಧಿಯಲ್ಲಿ ಆರಂಭಿಸಿದ್ದರು. ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ವೇಳೆ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗವನ್ನು ಮುನ್ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


