ಅಜರ್ ಬೈಜಾನ್ ನ ಗಂಜಾ ಪಟ್ಟಣದ ಮೇಲೆ ರಾಕೆಟ್ ದಾಳಿ: ಕಟ್ಟಡ ನಾಶ, ಐವರು ಸಾವು
ಅಜರ್ ಬೈಜಾನ್‍ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್‍ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ.

ಬಕು: ಅಜರ್ ಬೈಜಾನ್‍ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್‍ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ.
ಗಂಜಾ ನಗರವನ್ನು ಗುರಿಯಾಗಿಸಿಕೊಂಡು ಅರ್ಮೇನಿಯಾ ಪ್ರದೇಶದಿಂದ ಶೆಲ್ ದಾಳಿ ನಡೆಸಲಾಗಿದೆ ಎಂದು ಅಜರ್ ಬೈಜಾನ್ ರಕ್ಷಣಾ ಸಚಿವಾಲಯ ಭಾನುವಾರ ಮುಂಜಾನೆ ತಿಳಿಸಿದೆ.
‘ರಾಕೆಟ್ ದಾಳಿಯಿಂದ ಬೆಂಕಿ ಹೊತ್ತಿಕೊಂಡು ವಸತಿ ಕಟ್ಟಡ ಸಂಪೂರ್ಣವಾಗಿ ನಾಶವಾಗಿದೆ. ಮೃತಪಟ್ಟ ಐವರ ಮೃತದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆಯಲಾಗಿದೆ. ಅಲ್ಲದೆ, 17 ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ಅಜರ್ ಬೈಜಾನ್‍ನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


