ವಿದೇಶ

ವಿಶ್ವದಾದ್ಯಂತದ ಕೋವಿಡ್‍-19 ಪ್ರಕರಣಗಳ ಸಂಖ್ಯೆ 5.24 ಕೋಟಿ

ವಿಶ್ವದಾದ್ಯಂತ ಕೋವಿಡ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಕೋಟಿ 24 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.

ವಿಶ್ವದಾದ್ಯಂತದ ಕೋವಿಡ್‍-19 ಪ್ರಕರಣಗಳ ಸಂಖ್ಯೆ 5.24 ಕೋಟಿ
ಸಂಗ್ರಹ ಚಿತ್ರ
Published On :

ವಾಷಿಂಗ್ಟನ್: ವಿಶ್ವದಾದ್ಯಂತ ಕೋವಿಡ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಕೋಟಿ 24 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.

ಕೊರೋನಾವೈರಸ್ ನ ಒಟ್ಟು ಪ್ರಕರಣಗಳ ಸಂಖ್ಯೆ ಗುರುವಾರದ ವೇಳೆಗೆ 52,441,392ರಷ್ಟಿದೆ. ಮಾರಕ ಸೋಂಕಿನಿಂದ ಈವರೆಗೆ ವಿಶ್ವಾದ್ಯಂತ 12 ಲಕ್ಷ 89 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11 ರಂದು ಕೋವಿಡ್-19 ಅನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇದುವರೆಗೆ ಅಮೆರಿಕ, ಭಾರತ ಮತ್ತು ಬ್ರೆಜಿಲ್‍ ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.ಕಳೆದ ಕೆಲ ದಿನಗಳಿಂದ ಐರೋಪ್ಯ ಒಕ್ಕೂಟದ ಕೆಲ ದೇಶಗಳು, ಬ್ರೆಜಿಲ್‍ ಇನ್ನಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಇದರಿಂದ ಕೆಲ ದೇಶಗಳ ಲಾಕ್‍ ಡೌನ್‍ ಮತ್ತಿತರ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.