'ಕಟ್-ಕಾಪಿ-ಪೇಸ್ಟ್' ಜನಕ ಲ್ಯಾರಿ ಟೆಸ್ಲರ್ ನಿಧನ
ಜಗದ್ವಿಖ್ಯಾತ ಕಂಪ್ಯೂಟರ್ ವಿಜ್ಞಾನಿಬ್ರಾಂಕ್ಸ್ ಮೂಲದ ಲಾರೆನ್ಸ್ "ಲ್ಯಾರಿ ಟೆಸ್ಲರ್ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ನಾವೆಲ್ಲಾ ಬಳಸುವ "ಕಟ್, ಕಾಪಿ ಮತ್ತು ಪೇಸ್ಟ್" ಗಳನ್ನು ಜನಪ್ರಿಯಗೊಳಿಸಿದ್ದ ಲ್ಯಾರಿ ಈ ವಾರ ನಿಧನರಾದರೆಂದು ಖ್ಯಾತ ಸಂಸ್ಥೆ ಜೆರಾಕ್ಸ್ ವರದಿ ಮಾಡಿದೆ

ಸ್ಯಾನ್ ಫ್ರಾನ್ಸಿಸ್ಕೋ: ಜಗದ್ವಿಖ್ಯಾತ ಕಂಪ್ಯೂಟರ್ ವಿಜ್ಞಾನಿಬ್ರಾಂಕ್ಸ್ ಮೂಲದ ಲಾರೆನ್ಸ್ "ಲ್ಯಾರಿ ಟೆಸ್ಲರ್
ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ನಾವೆಲ್ಲಾ ಬಳಸುವ "ಕಟ್, ಕಾಪಿ ಮತ್ತು ಪೇಸ್ಟ್" ಗಳನ್ನು ಜನಪ್ರಿಯಗೊಳಿಸಿದ್ದ ಲ್ಯಾರಿ ಈ ವಾರ ನಿಧನರಾದರೆಂದು ಖ್ಯಾತ ಸಂಸ್ಥೆ ಜೆರಾಕ್ಸ್ ವರದಿ ಮಾಡಿದೆ
"ಕಟ್ / ಕಾಪಿ & ಪೇಸ್ಟ್, ಫೈಂಡ್ & ರಿಪ್ಲೇಸ್, ಮತ್ತು ಇನ್ನೂ ಹಲವಷ್ಟನ್ನು ಕಂಡುಹಿಡಿದ ಜೆರಾಕ್ಸ್ ಸಂಸ್ಥೆಯ ಮಾಜಿ ಸಂಶೋಧಕ ಲ್ಯಾರಿ ಟೆಸ್ಲರ್ ಇನ್ನಿಲ್ಲ"ಕಂಪನಿ ಟ್ವೀಟ್ ಮಾಡಿದೆ.
"ನಿಮ್ಮ ಕೆಲಸದ ದಿನಗಳು ಹಾಗೂ ಕ್ರಾಂತಿಕಾರಿ ವಿಚಾರಗಳಿಗೆಧನ್ಯವಾದಗಳು. ಲ್ಯಾರಿ ಸೋಮವಾರ ನಿಧನರಾದರು, ಆದ್ದರಿಂದ ಅವರಿಗೆ ಶ್ರದ್ದಾಂಜಲಿ ಆಚರಿಸಲು ನಮ್ಮೊಂದಿಗೆ ಸೇರಿಕೊಳ್ಳಿ."
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದ ಲ್ಯಾರಿ ಮಾನವ-ಕಂಪ್ಯೂಟರ್ ಸಂವಹನದಲ್ಲಿ ಪರಿಣತಿ ಹೊಂದಿದ್ದರು. ಅಮೆಜಾನ್, ಆಪಲ್, ಯಾಹೂ ಮತ್ತು ಜೆರಾಕ್ಸ್ ಪಾಲೊ ಆಲ್ಟೊ ಸಂಶೋಧನಾ ಕೇಂದ್ರದಲ್ಲಿ (ಪಿಎಆರ್ಸಿ) ತನ್ನ ವೃತ್ತಿಜೀವನದಲ್ಲಿ ಸೇವೆ ಸಲ್ಲಿಸಿದ್ದರು. ಕಟ್ ಆಂಡ್ ಪೇಸ್ಟ್ಕಮಾಂಡ್ ಗಳನ್ನು ಸೃಷ್ಟಿಸಿದ್ದ ಲ್ಯಾರಿಯವರ ಸಂಶೋಧನೆ ಆಧುನಿಕ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿದೆ. ಜೆರಾಕ್ಸ್ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ ಕಾಪಿ-ಕಟ್-ಪೇಸ್ಟ್ ಫಂಕ್ಷನ್ಅನ್ನು ಅವರು ಅನ್ವೇಷಣೆ ಮಾಡಿದ್ದರು.
70ರ ದಶಕದಲ್ಲಿ ಆ್ಯಪಲ್ ಕಂಪ್ಯೂಟರ್ ಅಭಿವೃದ್ಧಿ ಮಾಡಲು ಟೆಸ್ಲರ್ ಸಾಕಷ್ಟು ಕೊಡುಗೆ ನೀಡಿದ್ದು. 1997ರಲ್ಲಿ ಸಂಸ್ಥೆಯನ್ನು ತೊರೆದಿದ್ದರು.ರು. 2011ರಲ್ಲಿ ಅಮೆಜಾನ್ ಜೊತೆ ಕೈ ಜೋಡಿಸಿದ್ದ ಈ ಸಂಶೋಧಕನ ಶಾವಿಗೆ ಖ್ಯಾತ ತಂತ್ರಜ್ಞಾನ ಆಧಾರಿತ ಸಂಸ್ಥೆಗಳು ಶೋಕ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


