ಡೊನಾಲ್ಡ್ ಟ್ರಂಪ್ ರನ್ನು ಕಾರಾಗೃಹದಲ್ಲಿರಿಸಿ ರೇಪ್ ಮಾಡಬೇಕು: ನಟಿ ಡೆಬ್ರಾ ಮೆಸ್ಸಿಂಗ್!
'ವಿಲ್ & ಗ್ರೇಸ್' ಖ್ಯಾತಿಯ ನಟಿ ಡೆಬ್ರಾ ಮೆಸ್ಸಿಂಗ್ ಅವರಿಗೆ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಅಸಮಾಧಾನ ಗೊತ್ತೇ ಇರುವಂತಹದ್ದು, ಈಗ ಟ್ರಂಪ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿರುವಾಗ ಹಾಲಿ ಅಧ್ಯಕ್ಷರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

'ವಿಲ್ & ಗ್ರೇಸ್' ಖ್ಯಾತಿಯ ನಟಿ ಡೆಬ್ರಾ ಮೆಸ್ಸಿಂಗ್ ಅವರಿಗೆ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಅಸಮಾಧಾನ ಗೊತ್ತೇ ಇರುವಂತಹದ್ದು, ಈಗ ಟ್ರಂಪ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿರುವಾಗ ಹಾಲಿ ಅಧ್ಯಕ್ಷರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
"ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಂಡು ಶ್ವೇತಭವನದಿಂದ ನಿರ್ಗಮಿಸುತ್ತಿದ್ದಂತೆಯೇ ಅವರನ್ನು ಕಾರಾಗೃಹದಲ್ಲಿರಿಸಿ ರೇಪ್ ಮಾಡಬೇಕು" ಎಂದು ಡೆಬ್ರಾ ಮೆಸ್ಸಿಂಗ್ ಟ್ವೀಟ್ ಮಾಡಿದ್ದಾರೆ
ಟ್ವಿಟರ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಟ್ಯಾಗ್ ಮಾಡಿರುವ ನಟಿ, ನೀವು ದುರ್ಬಲ, ಭಯಗೊಂಡಿರುವ ವ್ಯಕ್ತಿ, ಅವಿವೇಕಿ, ಅಸಮರ್ಥ, ನಿರ್ಲಕ್ಷ್ಯ, ಪ್ರತೀಕಾರಕ್ಕೆ ಬಯಸುವ ವ್ಯಕ್ತಿ, ಕ್ರಿಮಿನಲ್ ಎಂದೆಲ್ಲಾ ನಿಂದಿಸಿರುವುದಷ್ಟೇ ಅಲ್ಲದೇ, ಕಾರಾಗೃಹದಲ್ಲಿ, ಸಹಖೈದಿಗಳಿಗೆ ಜನಪ್ರಿಯ ಬಾಯ್ ಫ್ರೆಂಡ್ ಆಗಿ ಸುದೀರ್ಘ ಜೀವನ ನಡೆಸುವಿರಿ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ನೆಟ್ಟಿಗರು ನಟಿಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಈಗ ಆಕೆಯ ಟ್ವೀಟ್ ನ್ನು ಡಿಲೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


