ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಿರುವ ಟಿಕ್‌ಟಾಕ್
ತಮ್ಮ ಮೂಲ ಕಂಪನಿ ಬೈಟ್ ಡ್ಯಾನ್ಸ್ ನೊಂದಿಗಿನ ವ್ಯವಹಾರಗಳನ್ನು ನಿಷೇಧಿಸಿದ ಕಾರ್ಯಕಾರಿ ಆದೇಶ ಹೊರಡಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸುವುದಾಗಿ ಚೀನಾ ಮೂಲದ ವಿಡಿಯೋ ಹಂಚಿಕೆ ಮಾಡುವ ಆ್ಯಪ್ ಟಿಕ್‌ಟಾಕ್ ತಿಳಿಸಿದೆ.

ಬೀಜಿಂಗ್: ತಮ್ಮ ಮೂಲ ಕಂಪನಿ ಬೈಟ್ ಡ್ಯಾನ್ಸ್ ನೊಂದಿಗಿನ ವ್ಯವಹಾರಗಳನ್ನು ನಿಷೇಧಿಸಿದ ಕಾರ್ಯಕಾರಿ ಆದೇಶ ಹೊರಡಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸುವುದಾಗಿ ಚೀನಾ ಮೂಲದ ವಿಡಿಯೋ ಹಂಚಿಕೆ ಮಾಡುವ ಆ್ಯಪ್ ಟಿಕ್‌ಟಾಕ್ ತಿಳಿಸಿದೆ.
ಮುಂದಿನ ವಾರದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಬೈಟ್ ಡ್ಯಾನ್ಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮ ಕಂಪನಿ ಮತ್ತು ಬಳಕೆದಾರರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾರ್ಯಕಾರಿ ಆದೇಶವನ್ನು ಪ್ರಶ್ನಿಸದೆ ಬೇರೆ ಆಯ್ಕೆಯಿಲ್ಲ ಎಂದು ಟಿಕ್‌ಟಾಕ್ ವಕ್ತಾರರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಟಿಕ್‌ಟಾಕ್ ಮತ್ತು ವೀಚಾಟ್ ಕಂಪನಿಗಳು ತಮ್ಮ ಷೇರುಗಳನ್ನು ಸೆ.15ರೊಳಗೆ ಅಮೆರಿಕ ಮೂಲದ ಕಂಪನಿಗಳಿಗೆ ಮಾರಾಟ ಮಾಡದಿದ್ದಲ್ಲಿ ಅವುಗಳನ್ನು ನಿಷೇಧಿಸುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ್ದರು.
ಬೈಟ್ ಡ್ಯಾನ್ಸ್ ಸದ್ಯ ಮೈಕ್ರೋಸಾಫ್ಟ್ ಮತ್ತು ಓರಾಕಲ್ ನಡುವೆ ಮಾತುಕತೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


