ವಿದೇಶ

ಟೇಕಾಫ್ ಆದ 6 ನಿಮಿಷಕ್ಕೆ ವಿಮಾನ ಪತನ; 157 ಮಂದಿ ಸಜೀವ ದಹನ, ಭೀಕರ ದೃಶ್ಯ!

ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ.

ಟೇಕಾಫ್ ಆದ 6 ನಿಮಿಷಕ್ಕೆ ವಿಮಾನ ಪತನ; 157 ಮಂದಿ ಸಜೀವ ದಹನ, ಭೀಕರ ದೃಶ್ಯ!
ಸಂಗ್ರಹ ಚಿತ್ರ
Published On :
ಆಡಿಸ್ ಅಬಬಾ: ಇಥಿಯೋಪಿಯಾದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡಿದ್ದು 157 ಮಂದಿ ಸಜೀವ ದಹನವಾಗಿದ್ದಾರೆ.
ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೋಫ್ಟು ಬಳಿ ವಿಮಾನ ಪತನಗೊಂಡಿದೆ. 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. 
ಇಥಿಯೋಪಿಯಾದ ಏರ್ ಲೈನ್ಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು 8 ಮಂದಿ ಸಿಬ್ಬಂದಿ 149 ಮಂದಿ ಪ್ರಯಾಣಿಕರಿದ್ದ ಬೋಯಿಂಗ್ 737-8 ಮ್ಯಾಕ್ಸ್ ಹೆಸರಿನ ವಿಮಾನ ಪತನವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.