ಪಾಕ್ ಯುವಕನಿಂದ ಟ್ವಿಟ್ಟರ್ ನಲ್ಲಿ ಫೇಕ್ ವಿಡಿಯೋ; ಮತ್ತೆ ವೈರಲ್ ಆಯ್ತು ಬೆಂಗಳೂರು ಏರ್ ಷೋ ದುರಂತದ ವಿಡಿಯೋ
ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ದುರಂತದ ವಿಡಿಯೋ ಅಪ್ಲೋಡ್ ಮಾಡಿ ಇದು ಪಾಕ್ ವಾಯುಸೇನೆ ಹೊಡೆದುರುಳಿಸಿದ ಭಾರತೀಯ ಪೈಲಟ್ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ.

Published On :
ನವದೆಹಲಿ: ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ದುರಂತದ ವಿಡಿಯೋ ಅಪ್ಲೋಡ್ ಮಾಡಿ ಇದು ಪಾಕ್ ವಾಯುಸೇನೆ ಹೊಡೆದುರುಳಿಸಿದ ಭಾರತೀಯ ಪೈಲಟ್ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ.
ಹೌದು... ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ಪಾಕಿಸ್ತಾನ ಮುಜುಗರ ತಪ್ಪಿಸಿಕೊಳ್ಳಲು ಮತ್ತು ತಾನೂ ಕೂಡ ಭಾರತದಷ್ಟೇ ಬಲಿಷ್ಠ ಎಂದು ತೋರಿಸಿಕೊಳ್ಳಲು ಹೋಗಿ ಅಕ್ಷರಶಃ ನಗೆಪಾಟಲಿಗೀಡಾಗುತ್ತಿದೆ. ಇದೇ ಕಾರಣಕ್ಕೆ ಇಂದು ಭಾರತೀಯ ಪೋಸ್ಟ್ ಗಳ ಮೇಲೆ ವಾಯುದಾಳಿ ಮಾಡುವ ರೀತಿ ಬಿಂಬಿಸಿ ಖಾಲಿ ಸ್ಥಳದಲ್ಲಿ ಬಾಂಬ್ ಹಾಕಿ ಹಿಂದುರಿಗಿತ್ತು. ಅಲ್ಲದೆ ತಾನೂ ಕೂಡ ಭಾರತದ 2 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಘೋಷಣೆ ಮಾಡಿತ್ತು.
ಆದರೀಗ ಪಾಕಿಸ್ತಾನ ಸೇನೆ ವಶದಲ್ಲಿ ಕೇವಲ ಓರ್ವ ಪೈಲಟ್ ಮಾತ್ರ ಇದ್ದು 2ನೇ ಪೈಲಟ್ ಸುದ್ದಿ ಫೇಕ್ ಎಂದು ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗಳನ್ನು ಮುಂದಿಟ್ಟುಕೊಂಡು ಪಾಕ್ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ ಎಂದು ಮತ್ತೆ ಸಾಬೀತಾಗಿದೆ.
ಇದಕ್ಕೆ ಇಂಬು ನೀಡುವಂತೆ ಪಾಕಿಸ್ತಾನದ ಯುವಕನೋರ್ವ ಬೆಂಗಳೂರು ಏರ್ ಶೋ ವೇಳೆ ಸಂಭವಿಸಿದ್ದ ವಿಮಾನಗಳ ದುರಂತದ ವಿಡಿಯೋವನ್ನು ಅಪ್ಲೋಡ್ ಮಾಡಿ ಪಾಕಿಸ್ತಾನ ಸೇನೆ ಭಾರತದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಪೈಲಟ್ ನನ್ನು ಬಂಧಿಸಿದೆ ಎಂದು ಹೇಳಿದ್ದ. ವಖಾರ್ ರಿಜ್ವಿ ಎಂಬ ಟ್ವಿಟರ್ ಖಾತೆದಾರ ಈ ವಿಡಿಯೋ ಅಪ್ಲೋಡ್ ಮಾಡಿದ್ದ. ಆದರೆ ಈ ವಿಡಿಯೋಗೆ ಖಡಕ್ಕಾಗಿಯೇ ಭಾರತೀಯರು ತಿರುಗೇಟು ನೀಡಿದ್ದು, ಪಾಕಿಸ್ತಾನೀಯರು ಯಾವಾಗ ಕನ್ನಡ ಮಾತನಾಡಲು ಕಲಿತರು. ಮಾಡಲು ಕೆಲಸವಿಲ್ಲದೇ ಬಹುಶಃ ಕಲಿತರಬಹುದು ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಪಾಕಿಸ್ತಾನಿಯರ ಟ್ವೀಟ್ ಗಳು ಇದೀಗ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ. ಅಂದಹಾಗೆ, ಆ ವಿಡಿಯೋವನ್ನು ಭಾರತೀಯರೇ ಹೆಚ್ಚು ರೀಟ್ವೀಟ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


