ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣಕ್ಕೂ ಪಾಕಿ ಸೇನೆ ಕತ್ತರಿ ಪ್ರಯೋಗ?, ವೈರಲ್ ಆಯ್ತು ಸುದ್ದಿ!
ಪುಲ್ವಾಮ ಉಗ್ರ ದಾಳಿ ಸಂಬಂಧ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣದಲ್ಲೂ ಪಾಕಿಸ್ತಾನ ಸೇನೆ ತನ್ನ ಕತ್ತರಿ ಪ್ರಯೋಗ ಮಾಡಿದ್ದು, ಬರೊಬ್ಬರಿ 20 ಹೇಳಿಕೆಗಳಿಗೆ ಕತ್ತರಿಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Published On :
ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿ ಸಂಬಂಧ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭಾಷಣದಲ್ಲೂ ಪಾಕಿಸ್ತಾನ ಸೇನೆ ತನ್ನ ಕತ್ತರಿ ಪ್ರಯೋಗ ಮಾಡಿದ್ದು, ಬರೊಬ್ಬರಿ 20 ಹೇಳಿಕೆಗಳಿಗೆ ಕತ್ತರಿಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಬಗ್ಗೆ ಖಾಸಗಿ ಮಾಧ್ಯಮಗಳು ವರದಿ ಮಾಡಿದ್ದು, ಪುಲ್ವಾಮ ಉಗ್ರ ದಾಳಿ ನಡೆದ ಐದು ದಿನಗಳ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ ಪಾಕಿಸ್ತಾನ ಪ್ರಧಾನಿ ಅವರ ಈ ಹೇಳಿಕೆಯಲ್ಲೂ ಪಾಕಿಸ್ತಾನ ಸೇನೆ ಕತ್ತರಿ ಪ್ರಯೋಗ ಮಾಡಿದೆ ಎನ್ನಲಾಗಿದೆ.
ಇಮ್ರಾನ್ ಖಾನ್ ಮಾತನಾಡಿದ್ದ 6 ನಿಮಿಷದ ವಿಡಿಯೋದಲ್ಲಿ ಪಾಕ್ ಸೇನೆ ಬರೋಬ್ಬರಿ 20 ಕಡೆಗಳಲ್ಲಿ ಕತ್ತರಿ ಹಾಕಿ ಮಾಧ್ಯಮಗಳಿಗೆ ರಿಲೀಸ್ ಮಾಡಿದೆ ಎನ್ನಲಾಗಿದೆ. ಈ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಅಂತೆಯೇ ಪಾಕಿಸ್ತಾನದಲ್ಲಿ ಪ್ರಧಾನಿಯಂಥ ಘನತೆಯ ಹುದ್ದೆಯಲ್ಲಿರುವ ನಾಯಕರಿಗೂ ಸ್ವಾತಂತ್ರ್ಯ ಇಲ್ಲವೇ ಎಂಬ ಪ್ರಶ್ನೆಯೂ ಉದ್ಭವಾಗುತ್ತಿದೆ.
ಇನ್ನು ಪುಲ್ವಾಮ ದಾಳಿ ಸಂಬಂಧ ವಿಶ್ವದ ಪ್ರಮುಖ ರಾಷ್ಟ್ರಗಳು ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದರು. ಘಟನೆ ನಡೆದು ಐದು ದಿನ ಕಳೆದ್ರೂ ಪಾಕಿಸ್ತಾನ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ನಿನ್ನೆ ಪಾಕಿಸ್ತಾನ ಘಟನೆ ಬಗ್ಗೆ ಇಮ್ರಾನ್ ಖಾನ್ ಮಾತನಾಡಿರುವ ವಿಡಿಯೋ ಮಾಧ್ಯಮಗಳಿಗೆ ರಿಲೀಸ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಇಮ್ರಾನ್ ಖಾನ್ಇಸ್ಲಾಮಾಬಾದ್Imran KhanIslamabadPakistanಪಾಕಿಸ್ತಾನPakistan ArmyPulwama Terror Attackಪುಲ್ವಾಮ ಉಗ್ರ ದಾಳಿಭಾರತೀಯಸೇನೆಪಾಕಿಸ್ತಾನಸೇನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


