ತಾಯಿ ಕರಳು ಚಿರಋಣಿ: 21 ದಿನದ ನವಜಾತ ಶಿಶುವಿನ ಜೀವ ಉಳಿಸಿದ ಪೊಲೀಸರು, ವಿಡಿಯೋ ವೈರಲ್!
ಜನ ರಕ್ಷಕರಾಗಿರುವ ಪೊಲೀಸರು ತಾಯಿಯ ಎದೆಹಾಲು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ಕಷ್ಟಪಡುತ್ತಿದ್ದ 21 ದಿನದ ನಜಜಾತ ಶಿಶುವಿನ ಜೀವವನ್ನು ಉಳಿಸುವ ಮೂಲಕ ಇದೀಗ ಹೀರೋ ಆಗಿದ್ದಾರೆ.

Published On :
ಜನ ರಕ್ಷಕರಾಗಿರುವ ಪೊಲೀಸರು ತಾಯಿಯ ಎದೆಹಾಲು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಡಲು ಕಷ್ಟಪಡುತ್ತಿದ್ದ 21 ದಿನದ ನಜಜಾತ ಶಿಶುವಿನ ಜೀವವನ್ನು ಉಳಿಸುವ ಮೂಲಕ ಇದೀಗ ಹೀರೋ ಆಗಿದ್ದಾರೆ. ಇನ್ನು ಮಗುವಿನ ಜೀವ ಉಳಿಸಲು ಪೊಲೀಸರು ನಡೆಸಿದ ಪ್ರಯತ್ನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರೆಜಿಲ್ ನ ಸಾವ್ ಪಾಲೊ ಮರಿಲಿಯಾ ಸಮೀಪದ ಪೊಲೀಸ್ ಠಾಣೆಗೆ ದಂಪತಿಗಳು ನವಜಾತ ಶಿಶುವನ್ನು ತೆಗೆದುಕೊಂಡು ಬರುತ್ತಾರೆ. ಮಗುವನ್ನು ಕಂಡ ಪೊಲೀಸರಿಬ್ಬರು ಕೂಡಲೇ ಮಗುವಿನ ಬಾಯಿಗೆ ಬಾಯಿಟ್ಟು ಜೋರಾಗಿ ಉಸಿರು ಬಿಡುವ ಮೂಲಕ ಮಗುವನ್ನು ರಕ್ಷಿಸಿದ್ದಾರೆ.
ಪೊಲೀಸರು ಮಗುವನ್ನು ರಕ್ಷಿಸುತ್ತಿರುವಾಗ ಅಲ್ಲೇ ಇದ್ದ ತಾಯಿ ಆತಂಕದಲ್ಲಿ ಓಡಾಡುತ್ತಿರುವ ದೃಶ್ಯಗಳು ಎಂತಹವರ ಕರುಳು ಚುರುಕ್ ಅನ್ನುವಂತೆ ಮಾಡಿತು. ಇನ್ನು ಮಗು ಉಸಿರಾಡಿದ್ದನ್ನು ಗಮನಿಸಿದ ಕೂಡಲೇ ತಾಯಿ ಹೋದ ಜೀವ ಬಂದಿತು ಎಂಬಂತೆ ಸಂತೋಷಿಸಿದರು.
ಈ ವಿಡಿಯೋ ನೋಡಿದ ಟ್ವೀಟರಿಗರು ಪೊಲೀಸರಿಗೆ ಶಹಬಾಶ್ ಹೇಳಿದ್ದು ನೀವೇ ನಿಜವಾದ ಹೀರೋಗಳು ಎಂದು ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


