ವಿದೇಶ

ನೈಜಿರಿಯಾ : ಶಸ್ತ್ರ ಸಜ್ಜಿತ ವ್ಯಕ್ತಿಯಿಂದ ದಾಳಿ : 12 ಮಂದಿ ನಾಗರಿಕರ ಹತ್ಯೆ !

ನೈಜಿರಿಯಾದ ಗಡಿ ಪ್ರದೇಶ ಮಾಲಿ ಬಳಿ ಶಸ್ತ್ರ ಸಜ್ಜಿತ ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್ ನಲ್ಲಿ ಬಂದು ನೊಮ್ಯಾಡಿಕ್ ಸಮುದಾಯದ ಜನರ ಮೇಲೆ ದಾಳಿ ನಡೆಸಿದ್ದು, 12 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾನೆ.

ನೈಜಿರಿಯಾ :  ಶಸ್ತ್ರ ಸಜ್ಜಿತ ವ್ಯಕ್ತಿಯಿಂದ  ದಾಳಿ : 12 ಮಂದಿ ನಾಗರಿಕರ ಹತ್ಯೆ !
ಸಾಂದರ್ಭಿಕ ಚಿತ್ರ
Published On :

ಬಾಮಾಕೊ: ನೈಜಿರಿಯಾದ ಗಡಿ ಪ್ರದೇಶ ಮಾಲಿ ಬಳಿ ಶಸ್ತ್ರ ಸಜ್ಜಿತ ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್ ನಲ್ಲಿ ಬಂದು ನೊಮ್ಯಾಡಿಕ್ ಸಮುದಾಯದ ಜನರ ಮೇಲೆ ದಾಳಿ ನಡೆಸಿದ್ದು, 12 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾನೆ.

ಪಶ್ಚಿಮ ಮೇನಕಾದಿಂದ 45 ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ ಎಂದು ತೌರೆಗ್  ಸ್ವಯಂ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೌಸಾ ಅಗ್ ಅಚಾರಾತೌಮಾನೆ ತಿಳಿಸಿದ್ದಾರೆ.

ಮೇನಕಾದಲ್ಲಿ ಅಂತರ್ ಕೋಮುಗಳ ನಡುವಿನ ಘರ್ಷಣೆ ಹಾಗಾಗ್ಗೇ ಸಂಭವಿಸುತ್ತಿದ್ದು, ಈ ವರ್ಷದಲ್ಲಿ ಸುಮಾರು 100 ನಾಗರಿಕರು ಮೃತಪಟ್ಟಿದ್ದಾರೆ . ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯಪಾಲ ದೌದಾ ಮೈಗಾ ಹೇಳಿದ್ದಾರೆ.

ಆದರೆ, ಈವರೆಗೂ ಯಾವುದೇ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಕೊಂಡಿಲ್ಲ. ಕೆಲವು ತಿಂಗಳುಗಳ ಹಿಂದೆ ಇದಾರ್ಫೇನ್ ಸಮುದಾಯದ ಮೇಲೆ ಆಕ್ರಮಣಕಾರರು ದಾಳಿ ನಡೆಸಿದ್ದರು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.