ಆರ್ಥಿಕ ಸಂಕಷ್ಟ, ದಿವಾಳಿ ಅಂಚಿನಲ್ಲಿರುವ ಪಾಕ್ ಗೆ ಸೌದಿಯಿಂದ 6 ಬಿಲಿಯನ್ ಡಾಲರ್ ನೆರವು
ಆರ್ಥಿಕ ದೀವಾಳಿಯ ಅಂಚಿಗೆ ತಲುಪಿರುವ ಪಾಕಿಸ್ಥಾನಕ್ಕೆ ಸೌದಿ ಅರೇಬಿಯ ನೆರವು ನೀಡಲು ಮುಂದಾಗಿದ್ದು, ಪಾಕ್ ಸರ್ಕಾರಕ್ಕೆ 6 ಬಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ಹೇಳಿದೆ.

Published On :
ಇಸ್ಲಾಮಾಬಾದ್: ಆರ್ಥಿಕ ದೀವಾಳಿಯ ಅಂಚಿಗೆ ತಲುಪಿರುವ ಪಾಕಿಸ್ಥಾನಕ್ಕೆ ಸೌದಿ ಅರೇಬಿಯ ನೆರವು ನೀಡಲು ಮುಂದಾಗಿದ್ದು, ಪಾಕ್ ಸರ್ಕಾರಕ್ಕೆ 6 ಬಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ಹೇಳಿದೆ.
ಈಗಾಗಲೇ ಸೌದಿ ಸರ್ಕಾರ ಪಾಕಿಸ್ತಾನಕ್ಕೆ ನೀಡಲಾಗುವ ಸಾಲದ ಪ್ಯಾಕೇಜ್ ಕುರಿತು ನಿರ್ಧಾರ ಕೈಗೊಂಡಿದ್ದು, ಸಾಲ ಮರುಪಾವತಿಗೂ ಸೌದಿ ಸರ್ಕಾರ ಹೊಸ ಸ್ಕೀಂ ಅನ್ನು ಘೋಷಣೆ ಮಾಡಿದೆ. ಮೂಲಗಳ ಪ್ರಕಾರ ಅತ್ಯಂತ ತುರ್ತಿನ ರೂಪದಲ್ಲಿ ಈ ಸಾಲ ಪ್ಯಾಕೇಜ ಅನ್ನು ಪಾಕಿಸ್ಥಾನಕ್ಕೆ ನೀಡಲಾಗುತ್ತಿದ್ದು, ಮುಂದೂಡಲ್ಪಟ್ಟ ಪಾವತಿ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಸೌದಿ ಸರ್ಕಾರ ಹೇಳಿದೆ.
ಈ ಬಗ್ಗೆ ಸೌದಿ ಸರ್ಕಾರದ ವಕ್ತಾರರು ಪರೋಕ್ಷವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸೌದಿ ಅರೇಬಿಯ ತತ್‌ಕ್ಷಣಕ್ಕೆ ಈಗ 3 ಶತಕೋಟಿ ಡಾಲರ್ ಮೊತ್ತವನ್ನು ಪಾಕಿಸ್ಥಾನದ ಸ್ಟೇಟ್ ಬ್ಯಾಂಕ್ ನಲ್ಲಿ ನಗದು ಠೇವಣಿ ಇರಿಸಲಿದೆ. ಮಾತ್ರವಲ್ಲದೆ ತೈಲ ಆಮದಿಗೆಂದು ಇನ್ನೂ 3 ಶತಕೋಟಿ ಡಾಲರ್‌ಗಳನ್ನು ಮುಂಡೂಲ್ಪಟ್ಟ ಪಾವತಿ ನೆಲೆಯಲ್ಲಿ ನೀಡಲಿದೆ ಎಂದು ಹೇಳಿದ್ದಾರೆ. ಇದೇ ವಿಚಾರದ ಕುರಿತು ಪಾಕಿಸ್ತಾನದ ವಿದೇಶಾಂಗ ಇಲಾಖೆ ಕೂಡ ಸ್ಪಷ್ಟನೆ ನೀಡಿದೆ.
ಸೌದಿ ನೆರವಿನಿಂದಾಗಿ ಇದೀಗ ಪಾಕಿಸ್ತಾನಕ್ಕೆ ನಿರಾಳತೆ ಸಿಕ್ಕಿದ್ದು, ಇದರಿಂದಾಗಿ ಪಾಕಿಸ್ಥಾನಕ್ಕೆ ಐಎಂಎಫ್ ನಿಂದ ಹೊಸ ಸಾಲ ಪಡೆಯುವ ತಾಕತ್ತು ಬಂದಂತಾಗಿದೆ.
ಇನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಫಲವಾಗಿ ಪಾಕಿಸ್ಥಾನಕ್ಕೆ ಒಂದು ವರ್ಷದ ಬೆಂಬಲದ ರೂಪದಲ್ಲಿ 3 ಶತಕೋಟಿ ಡಾಲರ್‌ಗಳ ವಿದೇಶೀ ಕರೆನ್ಸಿಯನ್ನು ನೀಡಲಾಗುವುದು; ಇನ್ನೂ 3 ಶತಕೋಟಿ ಡಾಲರ್ ಗಳನ್ನು ತೈಲ ಅಮದಿಗಾಗಿ ಮುಂದೂಡಲ್ಪಟ್ಟ ಪಾವತಿ ನೆಲೆಯಲ್ಲಿ ಸಾಲ ರೂಪದಲ್ಲಿ ನೀಡಲಾಗುವುದು ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Saudi Arabiaಸೌದಿ ಅರೇಬಿಯಾಇಮ್ರಾನ್ ಖಾನ್ಇಸ್ಲಾಮಾಬಾದ್Imran KhanIslamabadPakistanಪಾಕಿಸ್ತಾನಆರ್ಥಿಕ ಸಂಕಷ್ಟEconomic Crisis
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


