ಅಮೆರಿಕ ಅಧ್ಯಕ್ಷ ಟ್ರಂಪ್ ರ ಹಾಲಿವುಡ್ 'ವಾಕ್ ಆಫ್ ಫೇಮ್' ಸ್ಟಾರ್ ಧ್ವಂಸ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ವಾಕ್ ಆಫ್ ಫೇಮ್' ಸ್ಟಾರ್ ಅನ್ನು ವ್ಯಕ್ತಿಯೊಬ್ಬರು ಧ್ವಂಸಗೊಳಿಸಿದ್ದಾರೆ.

Published On :
ಲಾಸ್ ಎಂಜಲೀಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ವಾಕ್ ಆಫ್ ಫೇಮ್' ಸ್ಟಾರ್ ಅನ್ನು ವ್ಯಕ್ತಿಯೊಬ್ಬರು ಧ್ವಂಸಗೊಳಿಸಿದ್ದಾರೆ.
ಟ್ರಂಪ್ ಆಡಳಿತ ವೈಖರಿಯಿಂದ ಬೇಸತ್ತು ವ್ಯಕ್ತಿ ಈ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ ಲಾಸ್ ಎಂಜಲೀಸ್ ನ ಪ್ರತಿಷ್ಟಿತ ಹಾಲಿವುಡ್ ಬೌಲೆವರ್ಡ್ ಸ್ಟ್ರೀಟ್ ನಲ್ಲಿನ ನೆಲಹಾಸುಗಳ ಮೇಲಿದ್ದ ಟ್ರಂಪ್ ಸ್ಚಾರ್ ಅನ್ನು ಧ್ವಂಸ ಮಾಡಲಾಗಿದೆ. ಬೆವರ್ಲಿ ಹಿಲ್ಸ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿರುವ ವ್ಯಕ್ತಿ ಪಾದಾಚಾರಿ ಮಾರ್ಗದಲ್ಲಿ ಹಾಕಲಾಗಿದ್ದ ಟ್ರಂಪ್ ಸ್ಟಾರ್ ಟೈಲ್ಸ್ ಅನ್ನು ಧ್ವಂಸಗೊಳಿಸಿದ್ದಾನೆ. ಪ್ರಸ್ತುತ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ದಾಳಿ ಇದೇ ಮೊದಲಲ್ಲ
ಇನ್ನು ಪ್ರಸ್ತುತ ಟ್ರಂಪ್ ಸ್ಟಾರ್ ಮೇಲೆ ನಡೆದಿರುವ ದಾಳಿ ಇದೇ ಮೊದಲಲ್ಲ. ಈ ಹಿಂದೆ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೂ ಕೂಡ 'ವಾಕ್ ಆಫ್ ಫೇಮ್' ಸ್ಟಾರ್ ಮೇಲೆ ದಾಳಿಯಾಗಿತ್ತು. ಬಳಿಕವೂ ಸಾಕಷ್ಟು ಬಾರಿ ದಾಳಿಯಾಗಿತ್ತಾದರೂ ಆದರೆ ಸಂಪೂರ್ಣವಾಗಿ ಧ್ವಂಸವಾಗಿರುವುದು ಇದು ಎರಡನೇ ಬಾರಿಗೆ.
ಹಾಲಿವುಡ್ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರ ಸ್ಮರಣಾರ್ಥ ಈ ಹಾಲಿವುಡ್ ಬೌಲೆವರ್ಡ್ ಸ್ಟ್ರೀಟ್ ನಲ್ಲಿ ಅವರ ಹೆಸರುಗಲನ್ನು 'ವಾಕ್ ಆಫ್ ಫೇಮ್' ಸ್ಟಾರ್ ನಲ್ಲಿ ಹಾಕಲಾಗುತ್ತದೆ. ಟ್ರಂಪ್ ಮನರಂಜನಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ನಿಮಿತ್ತ 2007ರಲ್ಲಿ ಅವರ ಹೆಸರನ್ನು ಇಲ್ಲಿ ಹಾಕುವ ಮೂಲಕ ಗೌರವ ಸಲ್ಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
USಅಮೆರಿಕHollywoodಹಾಲಿವುಡ್Los AngelesDonald Trumpಡೊನಾಲ್ಡ್ ಟ್ರಂಪ್ಲಾಸ್ ಎಂಜಲೀಸ್President Trumpಅಧ್ಯಕ್ಷ ಟ್ರಂಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


