ವಿದೇಶ

ಹೆಚ್1 ಬಿ ವೀಸಾ ಪ್ರಸ್ತಾವನೆ ಕೈಬಿಟ್ಟ ಟ್ರಂಪ್ ಸರ್ಕಾರ: ಅನಿವಾಸಿ ಭಾರತೀಯರಿಗೆ ಭಾರೀ ರಿಲೀಫ್!

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದಿಂದ ಪರೋಕ್ಷ ಗಡಿಪಾರು ಆತಂಕ ಎದುರಿಸುತ್ತಿದ್ದ ಅನಿವಾಸಿ ಭಾರತೀಯರಿಗೆ ಟ್ರಂಪ್ ಸರ್ಕಾರ ಬಹುದೊಡ್ಡ ರಿಲೀಫ್ ನೀಡಿದ್ದು, ಹೆಚ್1 ಬಿ ವೀಸಾದಾರರ ಗಡಿಪಾರು ಪ್ರಸ್ತಾಪ ಇಲ್ಲ ಎಂದು ಹೇಳಿದೆ.

ಹೆಚ್1 ಬಿ ವೀಸಾ ಪ್ರಸ್ತಾವನೆ ಕೈಬಿಟ್ಟ ಟ್ರಂಪ್ ಸರ್ಕಾರ: ಅನಿವಾಸಿ ಭಾರತೀಯರಿಗೆ ಭಾರೀ ರಿಲೀಫ್!
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕದಿಂದ ಪರೋಕ್ಷ ಗಡಿಪಾರು ಆತಂಕ ಎದುರಿಸುತ್ತಿದ್ದ ಅನಿವಾಸಿ ಭಾರತೀಯರಿಗೆ ಟ್ರಂಪ್ ಸರ್ಕಾರ ಬಹುದೊಡ್ಡ ರಿಲೀಫ್ ನೀಡಿದ್ದು, ಹೆಚ್1 ಬಿ ವೀಸಾದಾರರ ಗಡಿಪಾರು ಪ್ರಸ್ತಾಪ  ಇಲ್ಲ ಎಂದು ಹೇಳಿದೆ.
ಈ ಹಿಂದೆ ಹೆಚ್ 1 ಬಿ ವೀಸಾ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿ ಅಮೆರಿಕದಲ್ಲಿರುವ ಕೋಟ್ಯಂತರ ವಿದೇಶಿ ಉದ್ಯೋಗಸ್ಥರಿಗೆ ಶಾಕ್ ನೀಡಿದ್ದ ಟ್ರಂಪ್ ಸರ್ಕಾರ ಇದೀಗ ತನ್ನ ನಿಯಮವನ್ನು ಸಡಿಲಗೊಳಿಸಿದ್ದು, ಹೆಚ್1 ಬಿ  ವೀಸಾದಾರರ ಗಡಿಪಾರು ಪ್ರಸ್ತಾಪ  ಇಲ್ಲ ಎಂದು ಹೇಳಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಟ್ರಂಪ್ ಸರ್ಕಾರ ವೀಸಾ ಅವಧಿ ವಿಸ್ತರಣೆಗೆ ವೀಸಾದರರು ಮನವಿ ಮಾಡಿಕೊಳ್ಳಬಹುದು ಎಂದು ಹೇಳಿದೆ.
ಯುನೈಟೆಡ್ ಸ್ಟೇಟ್ಸ್ ನಾಗರಿಕತ್ವ ಮತ್ತು ವಲಸೆ ನಿಯಮ ಸೆಕ್ಷನ್ 104(c), AC-21 ರ ಅಡಿಯಲ್ಲಿ ಹೆಚ್ 1ಬಿ ವೀಸಾ ಅವಧಿ ಮುಕ್ತಾಯವಾದ ವಿದೇಶಿಗರನ್ನು ಗಡಿಪಾರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಅಂತೆಯೇ  ಪ್ರಸ್ತುತ 6 ವರ್ಷಗಳ ಅವಧಿ ಹೊಂದಿರುವ ಹೆಚ್ 1ಬಿ ವೀಸಾ ಅವಧಿಯನ್ನು ಅಗತ್ಯವಿದ್ದರೆ ಅವಧಿ ವಿಸ್ತರಣೆಗೆ ಅವಕಾಶ ಕೋರಬಹುದು. ಸೆಕ್ಷನ್ 106(a)-(b), AC21 ರ ಅಡಿಯಲ್ಲಿ ಒಂದು ವರ್ಷದ ಭತ್ಯೆ ಏರಿಕೆಯಡಿಯಲ್ಲಿ  ಒಂದು ವರ್ಷಗಳ ವೀಸಾ ಅವಧಿ ವಿಸ್ತಾರಕ್ಕೆ ಮನವಿ ಮಾಡಿಕೊಳ್ಳಬಹುದು ಎಂದು ಯುನೈಟೆಡ್ ಸ್ಟೇಟ್ಸ್ ನಾಗರಿಕತ್ವ ಮತ್ತು ವಲಸೆ ಸೇವೆಗಳ ಸಚಿವಾಲಯ ಮಾಧ್ಯಮ ವಕ್ತಾರ ಜೋನಾಥನ್ ವಿತಿಂಗ್ಟನ್ ಹೇಳಿದ್ದಾರೆ ಎಂದು  ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.