ವಿದೇಶ

ಈ ಹೋರಾಟ ನಿಮ್ಮೊಬ್ಬರದ್ದಲ್ಲ: CJP ಪ್ರತಿಭಟನೆಗೆ ಬಾಂಗ್ಲಾ ನಾಯಕ ನಹಿದ್ ಇಸ್ಲಾಂ ಬೆಂಬಲ

ನವದೆಹಲಿಯಲ್ಲಿ ಕಾಕ್ರಾಚ್ ಜನತಾ ಪಾರ್ಟಿ ನಾಯಕತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಆ ಕುರಿತ ವರದಿ ಇಲ್ಲಿದೆ:

ಈ ಹೋರಾಟ ನಿಮ್ಮೊಬ್ಬರದ್ದಲ್ಲ: CJP ಪ್ರತಿಭಟನೆಗೆ ಬಾಂಗ್ಲಾ ನಾಯಕ ನಹಿದ್ ಇಸ್ಲಾಂ ಬೆಂಬಲ
ದೆಹಲಿ ಕಾಕ್ರಾಚ್ ಜನತಾ ಪಾರ್ಟಿ ಪ್ರತಿಭಟನೆ — PTI Photo
Published On :

ಢಾಕಾ (ಬಾಂಗ್ಲಾದೇಶ): ನವದೆಹಲಿಯಲ್ಲಿ ಕಾಕ್ರಾಚ್ ಜನತಾ ಪಾರ್ಟಿ (CJP) ನಾಯಕತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎನ್‌ಸಿಪಿ ಸಂಚಾಲಕ ಹಾಗೂ ಬಾಂಗ್ಲಾದೇಶದ ಸಂಸದ ನಹಿದ್ ಇಸ್ಲಾಂ, "ಈ ಹೋರಾಟ ನಿಮ್ಮೊಬ್ಬರದ್ದಲ್ಲ, ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ" ಎಂದು ಭಾರತದ ಪ್ರತಿಭಟನಾಕಾರರಿಗೆ ಸಾಲಿಡಾರಿಟಿ ಪ್ರಕಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಈ ಹೋರಾಟ ನಿಮ್ಮೊಬ್ಬರದ್ದಲ್ಲ

ಪ್ರಜಾಪ್ರಭುತ್ವದ ಸ್ವಾತಂತ್ರ್ಯಕ್ಕಾಗಿ ಭಾರತದ ಯುವಜನರು ನಡೆಸುತ್ತಿರುವ ಹೋರಾಟಗಳು ಪರಸ್ಪರ ಸಂಬಂಧ ಹೊಂದಿವೆ ಎಂದ ನಹಿದ್ ಇಸ್ಲಾಂ, ಬಾಂಗ್ಲಾದೇಶದಲ್ಲಿ ನಡೆದ ಜುಲೈ 2024 ರ ವಿದ್ಯಾರ್ಥಿ ದಂಗೆಯನ್ನು ನೆನಪಿಸಿಕೊಂಡು, "ನಾವು ಈ ಹೋರಾಟವನ್ನು ಹತ್ತಿರದಿಂದ ಬಲ್ಲೆವು, ಏಕೆಂದರೆ ನಾವೂ ಇದನ್ನು ಅನುಭವಿಸಿದ್ದೇವೆ. ನಮ್ಮಲ್ಲಿ ಕೋಟಾ ವಿರೋಧಿ ವಿದ್ಯಾರ್ಥಿ ಚಳವಳಿಯೇ ನಿರಂಕುಶ ಆಡಳಿತದ ವಿರುದ್ಧದ ದೇಶವ್ಯಾಪಿ ಹೋರಾಟವಾಗಿ ಮಾರ್ಪಟ್ಟಿತ್ತು" ಹಾಗಾಗಿ, ಈ ಹೋರಾಟ ನಿಮ್ಮೊಬ್ಬರದ್ದಲ್ಲ ಎಂದು ತಿಳಿಸಿದ್ದಾರೆ.

ಮುಂದುವರೆದು, ದೆಹಲಿಯ ಜಂತರ್ ಮಂತರ್ ಬಳಿ ಪೊಲೀಸರು ಪ್ರತಿಭಟನಾಕಾರರು, ಸಂಘಟಕರು ಮತ್ತು ಪತ್ರಕರ್ತರನ್ನು ವಶಕ್ಕೆ ಪಡೆದಿರುವುದನ್ನು ಹಾಗೂ ಇಂಟರ್ನೆಟ್ ಸೇವೆಗಳ ಮೇಲೆ ನಿರ್ಬಂಧ ಹೇರಿರುವುದನ್ನು ಅವರು ತೀವ್ರವಾಗಿ ಖಂಡಿಸಿದ ನಹಿದ್ ಇಸ್ಲಾಂ, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ. ಇದೇ ವೇಳೆ, "ಹಿಂದುತ್ವದ ಬಹುಸಂಖ್ಯಾತವಾದ, ಫ್ಯಾಸಿಸಂ ಮತ್ತು ಯಾವುದೇ ರೀತಿಯ ಧಾರ್ಮಿಕ ಪ್ರಾಬಲ್ಯವು ದಕ್ಷಿಣ ಏಷ್ಯಾದ ಭವಿಷ್ಯವನ್ನು ನಿರ್ಧರಿಸಬಾರದು" ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.