ಉತ್ತರ ಕೊರಿಯಾಗಿಂತಲೂ ಪ್ರಬಲ ಅಣ್ವಸ್ತ್ರದ ಬಟನ್ ನನ್ನ ಬಳಿ ಇದೆ: ಕಿಮ್ ಜಾಂಗ್ ಉನ್'ಗೆ ಟ್ರಂಪ್ ತಿರುಗೇಟು
ಸದಾಕಾಲ ಯುದ್ಧೋತ್ಸಾಹದ ಹೇಳಿಕೆ ನೀಡುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ತಿರುಗೇಟು ನೀಡಿದ್ದಾರೆ...

Published On :
ವಾಷಿಂಗ್ಟನ್: ಸದಾಕಾಲ ಯುದ್ಧೋತ್ಸಾಹದ ಹೇಳಿಕೆ ನೀಡುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ತಿರುಗೇಟು ನೀಡಿದ್ದಾರೆ.
ಹೊಸ ವರ್ಷದ ಮೊದಲ ಭಾಷಣದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದ ಕಿಮ್ ಜಾಂಗ್ ಉನ್ ಅವರು, ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ ಹುಷಾರಾಗಿರಿ ಎಂದು ಎಚ್ಚರಿಸಿದ್ದರು.
ಪಯೋಂಗ್ಯಾಂಗ್ ಮತ್ತು ಸಿಯೋಲ್ ಜೊತೆಗಿನ ಉನ್ನತ ಮಟ್ಟದ ಮಾತುಕತೆಗೆ ನಿರಾಕರಿಸಿರುವ ಟ್ರಂಪ್ ಅವರು, ಟ್ವಿಟರ್ ನಲ್ಲಿ ಕಿಮ್ ಜಾಂಗ್ ಉನ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರದ ಬಟನ್ ಸದಾಕಾಲ ತಮ್ಮ ಟೇಬಲ್ ಮೇಲಿರುತ್ತದೆ ಎಂದು ಹೇಳಿದ್ದಾರೆ. ದಯವಿಟ್ಟು ಅವರಿಗೂ ತಿಳಿಸಿ ನನ್ನ ಬಳಿಯೂ ಅಣ್ವಸ್ತ್ರದ ಬಟನ್ ಇದ್ದು, ಅದು ಉತ್ತರ ಕೊರಿಯಾ ನಾಯಕನ ಬಳಿಯಿರುವ ಅಣ್ವಸ್ತ್ರಕ್ಕಿಂತಲೂ ದೊಡ್ಡದಾಗಿದೆ ಹಾಗೂ ಪ್ರಭಾವಶಾಲಿಯಾಗಿದೆ. ನನ್ನ ಬಳಿಯಿರುವ ಬಟನ್ ಕೆಲಸಮಾಡುತ್ತಿದೆ ಎಂದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
USಅಮೆರಿಕNorth Koreaಉತ್ತರ ಕೊರಿಯಾKim Jong-unDonald Trumpಡೊನಾಲ್ಡ್ ಟ್ರಂಪ್ಕಿಮ್ ಜಾಂಗ್ ಉನ್Nuclear buttonಅಣ್ವಸ್ತ್ರ ಬಟನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


