ಗಿಲ್ಗಿಟ್-ಬಾಲ್ಟಿಸ್ತಾನ ಶಾಲೆಗಳ ಮೇಲೆ ದಾಳಿ; ಮೂಲಭೂತವಾದಿಗಳ ನಡೆ ಖಂಡನೀಯ: ಮಲಾಲಾ ಯೂಸುಫ್ ಝೈ
ಹೆಣ್ಣು ಮಕ್ಕಳ ಶಿಕ್ಷಣ ವಿರೋಧಿಸಿ 12 ಶಾಲೆಗಳಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದ್ದ ಮೂಲಭೂತ ವಾದಿಗಳ ನಡೆಯನ್ನು ಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫೈ ಝೈ ತೀವ್ರವಾಗಿ ಖಂಡಿಸಿದ್ದಾರೆ.

Published On :
ಇಸ್ಲಾಮಾಬಾದ್: ಹೆಣ್ಣು ಮಕ್ಕಳ ಶಿಕ್ಷಣ ವಿರೋಧಿಸಿ 12 ಶಾಲೆಗಳಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದ್ದ ಮೂಲಭೂತ ವಾದಿಗಳ ನಡೆಯನ್ನು ಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫೈ ಝೈ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ, ಹೆಣ್ಣು ಮಕ್ಕಳು ಓದುತ್ತಿದ್ದಾರೆ ಎಂಬ ಕಾರಣಕ್ಕೇ 12 ಶಾಲೆಗಳ ಮೇಲೆ ದಾಳಿ ಮಾಡಲಾಗಿದೆ. ಇದು ನಿಜಕ್ಕೂ ಖಂಡನೀಯ. ಅವರ ಗುರಿ ಶಾಲೆಗಳಲ್ಲ. ಶಾಲೆಗಳಲ್ಲಿ ವಿದ್ಯೆ ಕಲಿಯುತ್ತಿರುವ ಹೆಣ್ಣು ಮಕ್ಕಳು. ಶಾಲೆಗಳನ್ನು ಮರು ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆತನ್ನಿ. ಆ ಮೂಲಕ ಪ್ರತೀಯೊಬ್ಬ ಬಾಲಕ ಮತ್ತು ಬಾಲಕಿಗೆ ಶಿಕ್ಷಣ ಮಹತ್ವದ ಹಕ್ಕು ಎಂಬುದನ್ನು ಸಾರಿ ಹೇಳಬೇಕು ಎಂದು ಮಲಾಲಾ ಆಗ್ರಹಿಸಿದ್ದಾರೆ.
ಇನ್ನು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ನ ಡಯಾಮಿರ್ ನಲ್ಲಿ ಮೂಲಭೂತವಾದಿಗಳು ಒಟ್ಟು 12 ಶಾಲೆಗಳಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದ್ದಾರೆ. ಈ ಪೈಕಿ ಒಂದು ಶಾಲೆ ಬಾಲಕಿಯರ ಶಾಲೆಯಾಗಿದ್ದು, ಶಾಲೆಯಲ್ಲಿದ್ದ ಮಕ್ಕಳ ಪಠ್ಯ ಪುಸ್ತಕಗಳನ್ನೂ ಕೂಡ ಬೆಂಕಿಗಾಹುತಿ ಮಾಡಲಾಗಿದೆ. ಆದರೆ ಘಟನೆಯಲ್ಲಿ ಯಾರಿಗೂ ಸಾವುನೋವುಗಳಾದ ಕುರಿತು ವರದಿಯಾಗಿಲ್ಲ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಸ್ಲಾಮಾಬಾದ್IslamabadPakistanಪಾಕಿಸ್ತಾನಮಲಾಲಾ ಯೂಸುಫ್ ಝೈನೊಬೆಲ್ ಪ್ರಶಸ್ತಿGilgit-Baltistanಗಿಲ್ಗಿಟ್-ಬಾಲ್ಟಿಸ್ತಾನ್Malala YousufzaiNoble Prize
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


