ವಿದೇಶ

ಆನ್ ಲೈನ್ ಮತ್ತು ವೀಸಾ ವಂಚನೆ: ಭಾರತ ಮೂಲದ ವ್ಯಕ್ತಿಗೆ ಅಮೆರಿಕಾ ಸರ್ಕಾರ ಶಿಕ್ಷೆ

ದೂರಸಂಪರ್ಕ ಅಥವಾ ಮಾಹಿತಿ ತಂತ್ರಜ್ಞಾನದ ಬಳಕೆ ಒಳಗೊಂಡ ಹಣಕಾಸು ಮತ್ತು ವೀಸಾ...

ಆನ್ ಲೈನ್ ಮತ್ತು ವೀಸಾ ವಂಚನೆ: ಭಾರತ ಮೂಲದ ವ್ಯಕ್ತಿಗೆ ಅಮೆರಿಕಾ ಸರ್ಕಾರ ಶಿಕ್ಷೆ
ಸಾಂದರ್ಭಿಕ ಚಿತ್ರ
Published On :

ನ್ಯೂಯಾರ್ಕ್: ದೂರಸಂಪರ್ಕ ಅಥವಾ ಮಾಹಿತಿ ತಂತ್ರಜ್ಞಾನದ ಬಳಕೆ ಒಳಗೊಂಡ ಹಣಕಾಸು ಮತ್ತು ವೀಸಾ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಅಮೆರಿಕಾ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ದೂರಸಂಪರ್ಕ ಮತ್ತು ವೀಸಾ ವಂಚನೆಯಡಿಯಲ್ಲಿ ಭಾರತೀಯ ಕೆಲಸಗಾರರಿಗೆ ಹೆಚ್1ಬಿ ವೀಸಾ ಮತ್ತು ಗ್ರೀನ್ ಕಾರ್ಡು ಕೊಡಿಸಲು ಅಕ್ರಮವಾಗಿ ಶುಲ್ಕ ಸಲ್ಲಿಕೆಗೆ 4,50,000 ಅಮೆರಿಕನ್ ಡಾಲರ್ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ವಿರ್ಗೊ ಇಂಕ್ ಮತ್ತು ಇಸಿಂಕ್ ಸೊಲ್ಯುಷನ್ಸ್ ನ ಮಾಜಿ ಮಾಲಿಕ ಮತ್ತು ಕಾರ್ಯನಿರ್ವಾಹಕ ರಮೇಶ್ ವೆಂಕಟ ಪೊತುರುಗೆ ವೀಸಾ ಮತ್ತು ದೂರಸಂಪರ್ಕ ವಂಚನೆಯಡಿಯಲ್ಲಿ ಒಂದು ವರ್ಷ 1 ದಿನದ ದೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾದ ವಲಸೆ ಮತ್ತು ಸುಂಕ ಜಾರಿ ನಿರ್ದೇಶನಾಲಯ ಹೇಳಿದೆ.

ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೆ ಅಮೆರಿಕಾದ ಸುಂಕ ಜಾರಿ ನಿರ್ದೇಶನಾಲಯ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ತಪಾಸಣೆ ದಾಖಲೆ ಮತ್ತು ವಂಚನೆ ಲಾಭ ಕ್ರಿಯಾಪಡೆ ಜಂಟಿ ತನಿಖೆ ನಡೆಸಿದೆ.

ಅಕ್ರಮವಾಗಿ ಶುಲ್ಕ ಸಲ್ಲಿಸಿ ಮತ್ತು 100ಕ್ಕೂ ಹೆಚ್ಚು ಅಕ್ರಮ ವೀಸಾ ಮತ್ತು ಉದ್ಯೋಗಿಗಳ ಪ್ರಾಯೋಜಿತ ಗ್ರೀನ್ ಕಾರ್ಡುಗಳನ್ನು ನೀಡಿ ಪೊತುರು 4,50,000 ಡಾಲರ್ ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದರು. 2010ಮತ್ತು 2013ರ ನಡುವೆ ಪೊತುರು ವಿರುದ್ಧ ತನಿಖೆ ನಡೆಸಲಾಗಿದ್ದು ಭಾರತೀಯ ಕೆಲಸಗಾರರಿಂದ ಸಾವಿರಾರು ಡಾಲರ್ ಹಣವನ್ನು ಹೆಚ್-1ಬಿ ವಲಸೆರಹಿತ ಕೆಲಸಗಾರರಿಂದ ವೀಸಾ ಕಾರ್ಯಕ್ರಮದಡಿ ಸಂಗ್ರಹಿಸಿದ್ದರು.

ತಮ್ಮ ಖಾಸಗಿ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸುವ ಮೂಲಕ ಪೊತುರು ಅಕ್ರಮವಾಗಿ ಹಣವನ್ನು ಸಂಗ್ರಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.