ಅಮೆರಿಕದೊಂದಿಗೆ ಅಣ್ವಸ್ತ್ರ ತಗ್ಗಿಸುವ ಚರ್ಚೆಗೆ ಉತ್ತರ ಕೊರಿಯಾ ಸಿದ್ಧ: ವರದಿ
ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಕುರಿತು ಅಮೆರಿಕಾದೊಂದಿಗೆ ಚರ್ಚಿಸಲು ಉತ್ತರ ಕೊರಿಯಾ ಸಿದ್ಧವಾಗಿದೆ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Published On :
ವಾಷಿಂಗ್ಟನ್: ‘ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಕುರಿತು ಅಮೆರಿಕಾದೊಂದಿಗೆ ಚರ್ಚಿಸಲು ಉತ್ತರ ಕೊರಿಯಾ ಸಿದ್ಧವಾಗಿದೆ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಂಗ್ ಉನ್ ಅವರು ಟ್ರಂಪ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೊರಿಯಾದ ಆಡಳಿತಗಾರರಿಂದ ತಿಂಗಳ ಹಿಂದೆಯೇ ಕೇಳಿಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಇದೀಗ ಸ್ವತಃ ಅಮೆರಿಕದ ಅಧಿಕಾರಿಗಳು ಈ ಸಂಬಂಧ ಹೇಳಿಕೆ ನೀಡಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ವೇದಿಕೆ ಸಜ್ಜಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೂಲಗಳ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾವ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಮುಂದಿನ ತಿಂಗಳು ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಈ ಭೇಟಿಯ ಕುರಿತು ಉ.ಕೊರಿಯಾ ಸರ್ಕಾರ ಮತ್ತು ಅಮೆರಿಕ ಅಧಿಕಾರಿಗಳು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
ಇತ್ತೀಚೆಗಷ್ಟೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚೀನಾಕ್ಕೆ ಮಾರ್ಚ್ ಕೊನೆ ವಾರದಲ್ಲಿ ಭೇಟಿ ನೀಡಿ, ಅಲ್ಲಿನ ನಾಯಕರೊಂದಿಗೆ ಚರ್ಚಿಸಿದ್ದರು. ಆಗ ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಮಾತುಗಳನ್ನು ಆಡಿದ್ದರು. ‘ಶಾಂತಿ ಮರುಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಮೇಲೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಕಿಮ್ ತಿಳಿಸಿದ್ದರು.
ಇದಕ್ಕೂ ಮೊದಲು ದಕ್ಷಿಣ ಕೊರಿಯಾದೊಂದಿಗೆ ಸಂಬಂಧ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಿಮ್ ಜಾಂಗ್ ಉನ್ ಸಹೋದರಿಯ ನೇತೃತ್ವದಲ್ಲಿ ಉತ್ತರ ಕೊರಿಯಾ ನಿಯೋಗ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿತ್ತು. ಇದೇ ವೇದಿಕೆಯಲ್ಲೇ ಅಣ್ವಸ್ತ್ರ ತಗ್ಗಿಸುವ ಕುರಿತು ದಕ್ಷಿಣ ಕೊರಿಯಾದ ಮೂಲಕ ಅಮೆರಿಕ ತಂತ್ರಗಾರಿಕೆ ನಡೆಸಿತ್ತು ಎನ್ನಲಾಗಿದೆ.
ಒಟ್ಟಾರೆ ತನ್ನಲ್ಲಿನ ಅಣ್ವಸ್ತ್ರಗಳ ಮೂಲಕ ಪ್ರಪಂಚಕ್ಕೆ ಸವಾಲೆಸೆಯುತ್ತಿದ್ದ ಉತ್ತರ ಕೊರಿಯಾ ಇದೀಗ ಕೊಂಚ ತಣ್ಣಗಾಗಿರುವುದು ವಿಶ್ವದ ಆಂತಕವನ್ನು ಕೊಂಚ ಮಟ್ಟಿಗೆ ತಗ್ಗಿಸಿದೆ ಎಂದು ಹೇಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಮೆರಿಕWashingtonವಾಷಿಂಗ್ಟನ್Kim Jong UnNorth KoreaUSAಉತ್ತರ ಕೊರಿಯಾDonald Trumpಡೊನಾಲ್ಡ್ ಟ್ರಂಪ್ಕಿಮ್ ಜಾಂಗ್ ಉನ್Denuclearizationಅಣ್ವಸ್ತ್ರ ನಿಗ್ರಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


