ಮದುವೆಗೆ ಗಿಫ್ಟ್ ಬೇಡ, ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಿ: ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್
ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೆಗಾನ್ ಮರ್ಕೆಲ್ ಜೋಡಿ ತಮ್ಮ ವಿವಾಹಕ್ಕೆ ಆಗಮಿಸುವವರು ಸಾಂಪ್ರದಾಯಿಕ ಗಿಫ್ಟ್ ನೀಡುವುದರ ಬದಲು, ಅಗತ್ಯವಿರುವ 7 ಸಂಸ್ಥೆಗಳಿಗೆ ಆರ್ಥಿಕ ನೆರವು

Published On :
ಲಂಡನ್: ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೆಗಾನ್ ಮರ್ಕೆಲ್ ಜೋಡಿ ತಮ್ಮ ವಿವಾಹಕ್ಕೆ ಆಗಮಿಸುವವರು ಸಾಂಪ್ರದಾಯಿಕ ಗಿಫ್ಟ್ ನೀಡುವುದರ ಬದಲು, ಅಗತ್ಯವಿರುವ 7 ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಎಂದು ಕರೆ ನೀಡಿದ್ದಾರೆ.
ಬ್ರಿಟನ್ ರಾಜಕುಮಾರ ಹ್ಯಾರಿ-ಮರ್ಕೆಲ್ ಜೋಡಿ ಆರ್ಥಿಕ ನೆರವು ನೀಡುವಂತೆ ಕೇಳಿರುವ 7 ಸಂಸ್ಥೆಗಳ ಪೈಕಿ ಮುಂಬೈ ನ ನಗರ ಪ್ರದೇಶದ ಸ್ಲಮ್ ಗಳಲ್ಲಿರುವ ಮಹಿಳೆಯರಿಗೆ ಬೆಂಬಲ ನೀಡುತ್ತಿರುವ ಮೈನಾ ಮಹಿಳಾ ಫೌಂಡೇಶನ್ ಸಹ ಇದೆ. ಮೈನಾ ಮಹಿಳಾ ಸಂಘಟನೆ ಋತುಚಕ್ರದ ವೇಳೆ ನೈರ್ಮಲ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಅಗತ್ಯವಿರುವ ಮಹಿಳೆಯರಿಗೆ ಕೈಗೆಟುಕುವ ದರದಲ್ಲಿ ನೈರ್ಮಲ್ಯ ಉತ್ಪನ್ನಗಳನ್ನು ನೀಡುವ ಕೆಲಸ ಮಾಡುತ್ತಿದೆ.
ನಿಶ್ಚಿತಾರ್ಥದ ನಂತರ ತಮಗೆ ಕೋರಲಾಗಿರುವ ಶುಭಹಾರೈಕೆಗಳಿಗೆ ಪ್ರಿನ್ಸ್ ಹ್ಯಾರಿ ಮತ್ತು ಮೆಗಾನ್ ಮರ್ಕೆಲ್ ಕೃತಜ್ಞರಾಗಿದ್ದು, ವಿವಾಹ ಕಾರ್ಯಕ್ರಮದಲ್ಲಿ ತಮಗೆ ಉಡುಗೊರೆಗಳನ್ನು ನೀಡಲು ಬಯಸುವವರು ಉಡುಗೊರೆ ನೀಡುವ ಬದಲು ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿರುವ, ಅಗತ್ಯವಿರುವ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಲು ಕೋರಿದ್ದಾರೆ.
ಮೇ.19 ರಂದು ವಿವಾಹವಾಗುತ್ತಿರುವ ಜೋಡಿ , ತಾವೇ 7 ಸಂಸ್ಥೆಗಳನ್ನು ಆಯ್ಕೆ ಮಾಡಿದ್ದಾರೆ. CHIVA (ಚಿಲ್ಡ್ರನ್ಸ್ ಹೆಚ್ ಐ ವಿ ಅಸೋಸಿಯೇಷನ್), ದಿ ಹೋಮ್ ಲೆಸ್ ಚಾರಿಟಿ ಕ್ರೈಸಿಸ್, ಯೋಧರ ಮಕ್ಕಳಿಗೆ ಸಹಾಯ ಮಾಡುವ ಸ್ಕಾಟಿಸ್ ಲಿಟಲ್ ಸೋಲ್ಜರ್ಸ್, ಕ್ರೀಡೆಗಳ ಮೂಲಕ ಜೀವನವನ್ನು ಬದಲಾವಣೆ ಮಾಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಸ್ಟ್ರೀಟ್ ಗೇಮ್ಸ್, ಮರೇನ್ ಕನ್ಸರ್ವೇಷನ್ ಚಾರಿಟಿ, ದಿ ದಿ ವೈಲ್ಡರ್ನೆಸ್ ಫೌಂಡೇಶನ್ ಯುಕೆ ಹಾಗೂ ಮುಂಬೈ ನ ಮೈನಾ ಮಹಿಳಾ ಫೌಂಡೇಶನ್ ಹ್ಯಾರಿ ಮತ್ತು ಮೇಗಾನ್ ಮರ್ಕೆಲ್ ಆಯ್ಕೆ ಮಾಡಿರುವ ಸಂಸ್ಥೆಗಳಾಗಿವೆ.
2017 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪ್ರಿನ್ಸ್ ಹ್ಯಾರಿ-ಮೇಗಾನ್ ಮರ್ಕೆಲ್ ಜೋಡಿ ಮುಂಬೈ ನ ಮೈನಾ ಮಹಿಳಾ ಫೌಂಡೇಶನ್ ನ ಸ್ಥಾಪಕರಾದ ಸುಹಾನಿ ಜಲೋಟಾ ಅವರನ್ನು ಭೇಟಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


