ಉತ್ತರ ಕೊರಿಯಾದ 'ರಾಕೆಟ್ ಮ್ಯಾನ್' ನನ್ನು ಬಹಳ ಹಿಂದೆಯೇ ಒಂದು ಕೈ ನೋಡಿಕೊಳ್ಳಬೇಕಿತ್ತು: ಟ್ರಂಪ್
ಉತ್ತರ ಕೊರಿಯಾದ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ನಿರ್ವಹಿಸಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

Published On :
ಅಲಬಾಮಾ: ಉತ್ತರ ಕೊರಿಯಾದ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ನಿರ್ವಹಿಸಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ಅಮೆರಿಕದ ಅಲಬಾಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತು ಆತನ ತಂದೆ ಕಿಮ್ ಜಾಂಗ್ ಇಲ್ ವಿರುದ್ಧ ಕಿಡಿಕಾರಿದ್ದು, ಈ ಇಬ್ಬರು ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯ ನಿರ್ವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಸ ಬಿಲ್ ಕ್ಲಿಂಟನ್ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷರುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ಅಮೆರಿಕ ಈ ರಾಕೆಟ್ ಮ್ಯಾನ್ ಗಳನ್ನು ಬಹಳ ಹಿಂದೆಯೇ ಕಟ್ಟಿಹಾಕಿದ್ದರೆ ಅವರು ಇಂದು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಈ ಚಿಕ್ಕ ರಾಕೆಟ್ ಮ್ಯಾನ್ ನನ್ನು ನಿಗ್ರಹಿಸದಿದ್ದರೆ ಮುಂದೆ ಜಗತ್ತಿಗೆ ಖಂಡಿತಾ ಅಪಾಯ ಕಾದಿದೆ. ಹೀಗಾಗಿ ಆ ಕೆಲಸವನ್ನು ನಾವೇ ಮಾಡಬೇಕಿದೆ. ಉತ್ತರ ಕೊರಿಯಾದ ಅಣ್ವಸ್ತ್ರ ಯೋಜನೆಗಳು ಜಾಗತಿಕ ಭದ್ರತೆ ದೊಡ್ಡ ಅಪಾಯ ತಂದೊಡ್ಡಿದೆ. ಇದು ನಿಜಕ್ಕೂ ಸ್ವೀಕಾರಾರ್ಹವಲ್ಲ. ಈ ಹಿಂದಿನ ಸರ್ಕಾರಗಳು ಮಾಡಿದ ನಿರ್ಲಕ್ಷ್ಯವನ್ನು ತಾವು ಮಾಡುವಂತಿಲ್ಲ ಎಂದು ಹೇಳುವ ಮೂಲಕ ಟ್ರಂಪ್ ಉತ್ತರ ಕೊರಿಯಾ ವಿರುದ್ಧ ತಾವು ಸಮರ ಸಾರಲು ಸಿದ್ಧ ಎಂದು ಹೇಳಿದ್ದಾರೆ.
ಈ ಹಿಂದೆ ಟ್ವಿಟರ್ ನಲ್ಲಿ ಕಿಮ್ ಜಾಂಗ್ ವಿರುದ್ಧ ಕಿಡಿಕಾರಿದ್ದ ಟ್ರಂಪ್ ಕಿಮ್ ಜಾಂಗ್ ಉನ್ ನನ್ನು ಹುಚ್ಚ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದ ಕಿಮ್ ಜಾಂಗ್ ಉನ್ ಟ್ರಂಪ್ ರನ್ನು ಬೊಗಳುವ ನಾಯಿ ಎಂದು ಜರಿದಿದ್ದರು. ಉಭಯ ನಾಯಕರ ಕೆಸರೆರಚಾಟ ಇನ್ನೂ ಟ್ವಿಟರ್ ನಲ್ಲಿ ಮುಂದುವರೆದಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಮೆರಿಕNorth KoreaUSAಉತ್ತರ ಕೊರಿಯಾAlabamaKim Jong-unDonald Trumpಡೊನಾಲ್ಡ್ ಟ್ರಂಪ್ಕಿಮ್ ಜಾಂಗ್ ಉನ್ಅಲಬಾಮಾಅಣ್ವಸ್ತ್ರ ಪರೀಕ್ಷೆNuke Weapon Test
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.