ಅಣ್ವಸ್ತ್ರ ಪರೀಕ್ಷೆ: ಉತ್ತರ ಕೊರಿಯಾ ಇಂಧನ ರಫ್ತಿಗೆ ಚೀನಾ ಮಿತಿ ಹೇರಿಕೆ!
ಕಾಶ್ಮೀರ ವಿಚಾರವಾಗಿ ತಾವು ತಲೆ ಹಾಕುವುದಿಲ್ಲ ಎಂದು ಹೇಳಿ ಪಾಕಿಸ್ತಾಕ್ಕೆ ಕೈಕೊಟ್ಟಿದ್ದ ಚೀನಾ ಇದೀಗ ತನ್ನ ನೆಚ್ಚಿನ ಆಪ್ತ ರಾಷ್ಟ್ರ ಉತ್ತರ ಕೊರಿಯಾಗೂ ಕೈಕೊಟ್ಟಿದೆ.

Published On :
ಬೀಜಿಂಗ್: ಕಾಶ್ಮೀರ ವಿಚಾರವಾಗಿ ತಾವು ತಲೆ ಹಾಕುವುದಿಲ್ಲ ಎಂದು ಹೇಳಿ ಪಾಕಿಸ್ತಾಕ್ಕೆ ಕೈಕೊಟ್ಟಿದ್ದ ಚೀನಾ ಇದೀಗ ತನ್ನ ನೆಚ್ಚಿನ ಆಪ್ತ ರಾಷ್ಟ್ರ ಉತ್ತರ ಕೊರಿಯಾಗೂ ಕೈಕೊಟ್ಟಿದೆ.
ವಿಶ್ವ ಸಮುದಾಯದ ತೀವ್ರ ವಿರೋಧದ ಹೊರತಾಗಿಯೂ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಮಾಡಿರುವ ಹಿನ್ನಲೆಯಲ್ಲಿ ಆ ದೇಶಕ್ಕೆ ಚೀನಾದಿಂದ ರಫ್ತಾಗುತ್ತಿದ್ದ ಇಂಧನದ ಮೇಲೆ ಮಿತಿ ಹೇರಲು ನಿರ್ಧರಿಸಲಾಗಿದೆ. ಜನವರಿ 1ರಿಂದ ಜಾರಿಗೆ ಬರುವಂತೆ ಉತ್ತರ ಕೊರಿಯಾಗೆ ಚೀನಾದಿಂದ ರಫ್ತಾಗುತ್ತಿರುವ ಇಂಧನ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದ್ದು, ಜನವರಿ 1 ರಿಂದ ಉತ್ತರ ಕೊರಿಯಾಗೆ ನಿತ್ಯ 2 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾತ್ರ ರಫ್ತು ಮಾಡಲು ಚೀನಾ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಇಂಧನ ಇಲಾಖೆಗೆ ಆದೇಶಿಸಲಾಗಿದ್ದು, ದೊಡ್ಡ ಮಟ್ಟದಲ್ಲಿ ಇಂಧನ ರಫ್ತು ತಡೆಯುವಂತೆ ಸೂಚಿಸಲಾಗಿದೆ.
ಕೇವಲ ಇಂಧನ ಮಾತ್ರವಲ್ಲದೇ ಉತ್ತರ ಕೊರಿಯಾದಿಂದ ಚೀನಾಗೆ ಆಮದಾಗುತ್ತಿದ್ದ ಟೆಕ್ಸ್ ಟೈಲ್ ಗಳ ಮೇಲೂ ಚೀನಾ ನಿರ್ಬಂಧ ಹೇರಿದ್ದು, ಜವಳಿ ಉದ್ಯಮ ಉತ್ತರ ಕೊರಿಯಾದ ಪ್ರಮುಖ ಆದಾಯದ ಮೂಲವಾಗಿದೆ. ಇದಲ್ಲದೆ ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಸಮುದ್ರ ಆಹಾರಗಳು ಸೇರಿದಂತೆ ಹಲವು ವಾಣಿಜ್ಯ ವಹಿವಾಟು ಹೊಂದಿದ್ದು, ಇವುಗಳ ಮೇಲೂ ನಿರ್ಬಂದ ಹೇರಬೇಕು ಎಂದು ಇದೀಗ ಚೀನಾ ಮೇಲೆ ವಿಶ್ವ ಸಮುದಾಯ ಒತ್ತಡ ಹೇರುತ್ತಿದೆ.
ಮೂಲಗಳ ಪ್ರಕಾರ ಉತ್ತರ ಕೊರಿಯಾದ ಒಟ್ಟಾರೆ ಆದಾಯದ ಮೂಲಗಳಲ್ಲಿ ಚೀನಾ ಸಿಂಹಪಾಲು ಹೊಂದಿದ್ದು, ಉತ್ತರ ಕೊರಿಯಾದೊಂದಿಗೆ ಶೇ.90ರಷ್ಟು ವಾಣಿಜ್ಯ ವಹಿವಾಟು ಹೊಂದಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Beijingಬೀಜಿಂಗ್ChinaಚೀನಾKim Jong UnNorth Koreaಉತ್ತರ ಕೊರಿಯಾಕಿಮ್ ಜಾಂಗ್ ಉನ್Nuclear Testಅಣ್ವಸ್ತ್ರ ಪರೀಕ್ಷೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.