ವಿಶ್ವದ ದಡೂತಿ ಮಹಿಳೆ ಅಬುಧಾಬಿ ಆಸ್ಪತ್ರೆಗೆ ದಾಖಲು
ಭಾರತದಲ್ಲಿ ಚಿಕಿತ್ಸೆ ಪಡೆದು ಭಾರೀ ಪ್ರಮಾಣದ ತೂಕ ಇಳಿಸಿಕೊಂಡಿದ್ದ ವಿಶ್ವದ ದಢೂತಿ ಮಹಿಳೆ ಎಮಾನ್ ಅಹ್ಮದ್ ಅವರು ಚಿಕಿತ್ಸೆ ಮುಂದುವರಿಕೆಗಾಗಿ ಅಬುಧಾಬಿ...

Published On :
ಅಬುಧಾಬಿ: ಭಾರತದಲ್ಲಿ ಚಿಕಿತ್ಸೆ ಪಡೆದು ಭಾರೀ ಪ್ರಮಾಣದ ತೂಕ ಇಳಿಸಿಕೊಂಡಿದ್ದ ವಿಶ್ವದ ದಢೂತಿ ಮಹಿಳೆ ಎಮಾನ್ ಅಹ್ಮದ್ ಅವರು ಚಿಕಿತ್ಸೆ ಮುಂದುವರಿಕೆಗಾಗಿ ಅಬುಧಾಬಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾರತದಲ್ಲಿ ಚಿಕಿತ್ಸೆ ಪಡೆಯುವುದಕ್ಕೂ ಮೊದಲು ಎಮಾನ್ ಅಹ್ಮದ್ ಅವರ ತೂಕ ಬರೋಬ್ಬರಿ 500 ಕೆಜಿ ಇತ್ತು. ಮಾರ್ಚ್ ತಿಂಗಳಿನಲ್ಲಿ ಸೈಫಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ 323 ಕೆಜಿಯಷ್ಟು ಬಾರೀ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದರು.
ಈ ಹಿಂದೆ ಎಮಾನ್ ಅವರ ಸಹೋದರಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಸೈಫಿ ಆಸ್ಪತ್ರೆ ಎಮಾನ್'ಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಆಕೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ವೈದ್ಯರು ಹೇಳಿದಂತೆ ಆಕೆ ಭಾರೀ ಪ್ರಮಾಣದಲ್ಲಿ ತೂಕ ಕಳೆದುಕೊಂಡಿಲ್ಲ ಎಂದು ಹೇಳಿದ್ದರು.
ಈ ಆರೋಪವನ್ನು ತಳ್ಳಿಹಾಕಿದ್ದ ಆಸ್ಪತ್ರೆ, ಎಮಾನ್ ಳ ಚಿಕಿತ್ಸೆಗಾಗಿ ಈ ವರೆಗೂ ರೂ.3 ಕೋಟಿ ಖರ್ಚಾಗಿದೆ. ಅದರಲ್ಲಿ ರೂ.65 ಲಕ್ಷವನ್ನು ಭಾರತೀಯರು ದೇಣಿಗೆಯಾಗಿ ನೀಡಿದ್ದಾರೆ. ಉಳಿದ ಹಣವನ್ನೂ ಆಕೆಯ ಕುಟುಂಬದಿಂದ ಪಡೆದಿಲ್ಲ ಎಂದು ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
hospitalizedEgyptಆಸ್ಪತ್ರೆಗೆ ದಾಖಲುಈಜಿಪ್ಟ್Abu Dhabiಅಬುಧಾಬಿತೂಕ ಇಳಿಕೆweight lossHeaviest womanವಿಶ್ವದ ದಡೂತಿ ಮಹಿಳೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


