ವಿದೇಶ

ತಾಳ್ಮೆ ಮುಗಿದು ಹೋಯ್ತು: ಉತ್ತರ ಕೊರಿಯಾಗೆ ಟ್ರಂಪ್ ಎಚ್ಚರಿಕೆ

ಪರಮಾಣು ಬಾಂಬ್ ಬೆದರಿಕೆ ಹಾಕಿರುವ ಉತ್ತರ ಕೊರಿಯಾ ವಿರುದ್ಧ ತೀವ್ರವಾಗಿ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಾಳ್ಮೆ ಮುಗಿದು ಹೋಗಿದೆ...

ತಾಳ್ಮೆ ಮುಗಿದು ಹೋಯ್ತು: ಉತ್ತರ ಕೊರಿಯಾಗೆ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published On :
ವಾಷಿಂಗ್ಟನ್: ಪರಮಾಣು ಬಾಂಬ್ ಬೆದರಿಕೆ ಹಾಕಿರುವ ಉತ್ತರ ಕೊರಿಯಾ ವಿರುದ್ಧ ತೀವ್ರವಾಗಿ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಾಳ್ಮೆ ಮುಗಿದು ಹೋಗಿದೆ ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. 
ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್ ಅವರು ಉತ್ತರ ಕೊರಿಯಾ ವರ್ತನೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ಉತ್ತರಕೊರಿಯಾ ನಾಯಕರಿಗೆ ಮನುಷ್ಯರ ಜೀವದ ಬಗ್ಗೆ ಗೌರವವಿಲ್ಲ. ಅವರಿಗೆ ತನ್ನ ನಾಗರೀಕರು ಮತ್ತು ಸುತ್ತಮುತ್ತಲಿನ ನಾಗರಿಕರ ರಕ್ಷಣೆಯ ಬಗ್ಗೆ ಜವಾಬ್ದಾರಿಯಿಲ್ಲ. ಇದನ್ನು ಪದೇ ಪದೇ ಸಾಬೀತೂಪಡಿಸಿದೆ. ಉತ್ತರಕೊರಿಯಾದೊಂದಿಗಿನ ನಾವು ಮಾಡುತ್ತಿದ್ದ ತಾಳ್ಮೆಯ ಕಾರ್ಯತಂತ್ರಗಳು ವಿಫಲವಾಗಿದ್ದು, ನಮ್ಮ ತಾಳ್ಮೆ ಮುಗಿದುಹೋಗಿದೆ ಎಂದು ಟ್ರಂಪ್ ಹೇಳಿದ್ದಾರೆ. 
ಉತ್ತರಕೊರಿಯಾ ಸವಾಲು ಕುರಿತಂತೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ರಕ್ಷಣೆಗಾಗಿ ಈಗಾಗಲೇ ದಕ್ಷಿಣ ಕೊರಿಯಾ ಮತ್ತು ಜಪಾನ್ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿ ನಮ್ಮ ಉದ್ದೇಶವಾಗಿದೆ. ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಅಮೆರಿಕ ಎಂದಿಗೂ ಶಕ್ತವಾಗಿದೆ ಎಂದು ತಿಳಿಸಿದ್ದಾರೆ. 
ಉತ್ತರಕೋರಿಯಾದ ಸವಾಲಿನ ಕುರಿತಾಗಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ರಕ್ಷಣೆಗಾಗಿ  ಟ್ರಂಪ್‌ ದಕ್ಷಿಣ ಕೋರಿಯಾ ಮತ್ತು ಜಪಾನ್‌ನೊಂದಿಗೆ ಮಾತುಕತೆ ನಡೆಸಿದ್ದಾರೆ. ನಮ್ಮ ಮುಖ್ಯ ಉದ್ದೇಶ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ. ಅಮೆರಿಕ ಯಾವತ್ತೂ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಶಕ್ತವಾಗಿದೆ ಎಂದಿದ್ದಾರೆ. 
ಉತ್ತರ ಕೋರಿಯಾ ಹಾಗೂ ದಕ್ಷಿಣ ಕೊರಿಯಾ ನಡುವೆ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿದ್ದು, ವಿಶ್ವ ಸಮುದಾಯಕ್ಕೆ ಸವಾಲೊಡ್ಡಿ ಉತ್ತರ ಕೊರಿಯಾ ನಡೆಸಿದ್ದ ಪರಮಾಣು ಪರೀಕ್ಷೆ ಅಮೆರಿಕವನ್ನು ಕೆರಳಿಸಿದೆ. 
ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಉತ್ತರ ಕೊರಿಯಾ, ಅಮೆರಿಕ ತನ್ನ ಮೇಲೆ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತ ನೀಡುತ್ತೇವೆಂದು ಹೇಳಿತ್ತು. ಇದರ ಬೆನ್ನಲ್ಲೇ. ತನ್ನಲ್ಲಿರುವ ಅತ್ಯಾಧುನಿಕ ಕ್ಷಿಪಣಿಗಳ ಪರೇಡ್ ನಡೆಸುವ ಮೂಲಕ ವಿಶ್ವ ಸಮುದಾಯಕ್ಕೆ ಟಾಂಗ್ ನೀಡಿತ್ತು. ನಂತರ ಮತ್ತೊಂಡು ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದ್ದ ಉತ್ತರ ಕೊರಿಯಾಗ ಕ್ಷಿಪಣಿ ಪರೀಕ್ಷೆಯಲ್ಲಿ ವಿಫಲಗೊಂಡಿತ್ತು. ಈ ಮೂಲಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗೆ ಮುಖಭಂಗವಾಗಿತ್ತು. 
ಸಿನ್ಫೋ ಪ್ರದೇಶ ಜಪಾನ್ ದೇಶದ ಸಮುದ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದ್ದು, ಈ ಪ್ರದೇಶದ ಮೇಲಿನ ನಿಯಂತ್ರಣಕ್ಕಾಗಿ ಉತ್ತರ ಕೊರಿಯಾ ಹವಣಿಸುತ್ತಿದೆ. ಇದೇ ಕಾರಣಕ್ಕಾಗಿ ಈ ವಿವಾದಿತ ಪ್ರದೇಶದಲ್ಲೇ ತನ್ನ ಹಲವು ಕ್ಷಿಪಣಿಗಳನ್ನು ಪ್ರಯೋಗಕ್ಕೆ ಒಳಪಡಿಸಿದೆ. ಆ ಮೂಲಕ ಈ ಪ್ರದೇಶ ತನ್ನದು ಎಂಬ ಸಂದೇಶ ಸಾರಲು ಉತ್ತರ ಕೊರಿಯಾ ಮುಂದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.