ವಿದೇಶ

ಜೆಸಿಬಿ ಫಾರ್ಮ್ ಲೋಡರ್ ಚಾಲೂ ಮಾಡಿದ ನಾಯಿ: ಬಿಲೇನಿಯರ್ ಡೈರಿ ರೈತ ಸಾವು!

ಕೃಷಿ ಭೂಮಿಯಲ್ಲಿ ಬಳಕೆ ಮಾಡುವ ಜೆಸಿಬಿಯನ್ನು ನಾಯಿ ಚಾಲೂ ಮಾಡಿದ ಪರಿಣಾಮ 73 ವರ್ಷದ ಬಿಲೇನಿಯರ್ ಡೈರಿ ರೈತ ಮೃತಪಟ್ಟಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.

ಜೆಸಿಬಿ ಫಾರ್ಮ್ ಲೋಡರ್ ಚಾಲೂ ಮಾಡಿದ ನಾಯಿ: ಬಿಲೇನಿಯರ್ ಡೈರಿ ರೈತ ಸಾವು!
ಬಿಲೇನಿಯರ್ ಡೈರಿ ರೈತ ಸಾವು
Published On :
ಲಂಡನ್: ಕೃಷಿ ಭೂಮಿಯಲ್ಲಿ ಬಳಕೆ ಮಾಡುವ ಜೆಸಿಬಿಯನ್ನು ನಾಯಿ ಚಾಲೂ ಮಾಡಿದ ಪರಿಣಾಮ 73 ವರ್ಷದ ಬಿಲೇನಿಯರ್ ಡೈರಿ ರೈತ ಮೃತಪಟ್ಟಿರುವ ಘಟನೆ ಲಂಡನ್ ನಲ್ಲಿ ನಡೆದಿದೆ. 
ನಾರ್ತ್ ಸಾಮರ್ಸೆಟ್ ನ ಡೆರೆಕ್ ಮೀಡ್ ಮೃತಪಟ್ಟಿರುವ ರೈತನಾಗಿದ್ದಾರೆ. ಬೃಹತ್ ಪ್ರಮಾಣದ ಸರಕುಗಳನ್ನು ಸಾಗಣೆ ಮಾಡುವುದಕ್ಕೆ ಬಳಕೆ ಮಾಡಲಾಗುತ್ತಿದ್ದ ಜೆಸಿಬಿ ಫಾರ್ಮ್ ಲೋಡರ್ ನ್ನು ನಾಯಿ ಏಕಾಏಕಿ ಚಾಲೂ ಮಾಡಿದ ಪರಿಣಾಮ ರೈತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. 
ಜೆಸಿಬಿಯೊಳಗೆ ನುಗ್ಗಿದ ನಾಯಿ ಆಕಸ್ಮಿಕವಾಗಿ ಗೇರ್ ಲಿವರ್ ನ್ನು ಮುಂದೂಡಿದೆ. ಪರಿಣಾಮ ಜೆಸಿಬಿ ಫಾರ್ಮ್ ಲೋಡರ್ ಚಾಲೂ ಆಗಿ ರೈತನ ಮೇಲೆ ಹರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ರೈತನನ್ನು ಏರ್ ಆಂಬುಲೆನ್ಸ್ ಸಹಾಯದಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬಕುಳಿಯಲಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.