tractor

ಭೀಕರ: ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್; ತಿಂಡಿ ತರಲು ಹೋಗಿದ್ದ ಮಕ್ಕಳಿಗೆ ಗಂಭೀರ ಗಾಯ, Video Viral
ನಯಾ ತಲಾಬ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಯ ಅಂಗಡಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಂಗಡಿಯ ಸಮೀಪದಲ್ಲಿದ್ದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

ಶಾರ್ಟ್ಕಟ್'ಗಾಗಿ ನೀರಿಗೇ ಟ್ರ್ಯಾಕ್ಟರ್ ನುಗ್ಗಿಸಿದ ಭೂಪ: ನದಿ ಮಧ್ಯದಲ್ಲಿ ಸಿಲುಕಿ 10ಕ್ಕೂ ಹೆಚ್ಚು ಜನರು ಪರದಾಟ; ಮುಂದಾಗಿದ್ದೇನು..?
ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ನವಲಿ ಗ್ರಾಮದ ಭಕ್ತರು ಸಾಮಾನ್ಯವಾಗಿ ರಸ್ತೆ ಮಾರ್ಗ ಬಳಸುವುದಾದರೂ, ತಡವಾಗಬಹುದು ಎಂಬ ಕಾರಣಕ್ಕೆ ಶಾರ್ಟ್ಕಟ್ ಆಯ್ಕೆ ಮಾಡಿಕೊಂಡಿದ್ದಾರೆ.

ವರುಣನ ಅಬ್ಬರಕ್ಕೆ ಕೋಟೆನಾಡು ಚಿತ್ರದುರ್ಗ ತತ್ತರ: ಕೊಚ್ಚಿ ಹೋದ ಟ್ರ್ಯಾಕ್ಟರ್, ಠಾಣೆಗೆ ನುಗ್ಗಿದ ನೀರು!
ಹೊರಮಠದ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನವೂ ಮುಳುಗಡೆಯಾಗಿದೆ. ಸೋಮವಾರ ರಾತ್ರಿ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ.

ಮಧ್ಯಪ್ರದೇಶ: ಮರಳು ಮಾಫಿಯಾ, ಟ್ರ್ಯಾಕ್ಟರ್ ಹರಿಸಿ ಎಎಸ್ಐ ಹತ್ಯೆ!
ಮರಳು ಮಾಫಿಯಾ ದಂಧೆಯಲ್ಲಿ ತೊಡಗಿರುವವರು ಟ್ರಾಕ್ಟರ್ ಹರಿಸಿ ಎಎಸ್ ಐ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಶಹದೋಲ್ ಬಳಿ ಶನಿವಾರ ರಾತ್ರಿ ನಡೆದಿದೆ.

ಬೆಳಗಾವಿ: ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮನೆ ಮೇಲೆ ಪಲ್ಟಿ; ಓರ್ವ ಸಾವು, ಐವರಿಗೆ ಗಾಯ
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿ ಕೆಎಸ್ ಗ್ರಾಮದಲ್ಲಿ ಭಾನುವಾರ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಶೆಡ್ ಮೇಲೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಮೈಸೂರು: ಟ್ರ್ಯಾಕ್ಟರ್ ಮಗುಚಿ ಬಿದ್ದು ಮೂವರು ಸಾವು
ಜೋಳ ಬಿಡಿಸುವ ಟ್ರ್ಯಾಕ್ಟರ್ ಮಗುಚಿ ಬಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ನೆರಗ್ಯಾತನಹಳ್ಳಿಯಲ್ಲಿ ನಡೆದಿದೆ.

ಗದಗದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ, ಮಹಿಳೆ ಸ್ಥಿತಿ ಗಂಭೀರ!
ಕಾರ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಚಾಮರಾಜನಗರ: ಟ್ರ್ಯಾಕ್ಟರ್ ಹರಿದು ಬಾಲಕ ಸಾವು; ಪಶ್ಚಾತ್ತಾಪದಿಂದ ನೊಂದು ಚಾಲಕ ಆತ್ಮಹತ್ಯೆ!
ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಹರಿದ ಪರಿಣಾಮ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪಶ್ಚಾತ್ತಾಪದಿಂದ ನೊಂದ ಚಾಲಕನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯ ಎಂಬಲ್ಲಿ ವರದಿಯಾಗಿದೆ.

ಸೆಲ್ಫೀ ಕ್ರೇಜ್: ಟ್ರ್ಯಾಕ್ಟರ್ ಜೊತೆಗೇ ಬಾವಿಗೆ ಬಿದ್ದು 20 ವರ್ಷದ ಯುವಕ ಸಾವು!
ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದು 20 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಿರುಪಥೂರ್ ಜಿಲ್ಲೆಯ ವನಿಯಂಬಾಡಿ ಎಂಬ ಗ್ರಾಮದಲ್ಲಿ ನಡೆದಿದೆ.

