ಗೋಡೆಗೆ ಬೇಡಿಕೆ ಇಟ್ಟ ಟ್ರಂಪ್ ಗೆ ಮೆಕ್ಸಿಕೋ ಟಾಂಗ್; ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ಅಮೆರಿಕ ಪ್ರವಾಸವೇ ರದ್ದು!
ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸಬೇಕು ಎಂಬ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಾಯಕ್ಕೆ ಮಣಿಯದ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ತಮ್ಮ ಉದ್ದೇಶಿತ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸುವ ಮೂಲಕ ಟ್ರಂಪ್ ಗೆ ಟಾಂಗ್ ನೀಡಿದ್ದಾರೆ.

ವಾಷಿಂಗ್ಟನ್: ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಬೃಹತ್ ಗೋಡೆ ನಿರ್ಮಿಸಬೇಕು ಎಂಬ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಾಯಕ್ಕೆ ಮಣಿಯದ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ತಮ್ಮ ಉದ್ದೇಶಿತ ಅಮೆರಿಕ ಪ್ರವಾಸವನ್ನೇ ರದ್ದುಗೊಳಿಸುವ ಮೂಲಕ ಟ್ರಂಪ್ ಗೆ ಟಾಂಗ್ ನೀಡಿದ್ದಾರೆ.
ನಿನ್ನೆಯಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಗಡಿಯಲ್ಲಿ ಮೆಕ್ಸಿಕೋ ಹಣದೊಂದಿಗೆ ಬೃಹತ್ ಗೋಡೆ ನಿರ್ಮಿಸಬೇಕು ಎನ್ನುವ ಆದೇಶಕ್ಕೆ ಸಹಿ ಹಾಕಿದ ಬೆನ್ನಲ್ಲೇ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ಅವರು ತಮ್ಮ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಅಮೆರಿಕ ಗಡಿಯಲ್ಲಿ ಮೆಕ್ಸಿಕೋ ಹಣದೊಂದಿಗೆ ಗೋಡೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೆಕ್ಸಿಕೋ ರಾಜಕಾರಣಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.
ಇನ್ನು ಈ ಬಗ್ಗೆ ಫಿಲಿಡೆಲ್ಫಿಯಾದಲ್ಲಿ ನಡೆದ ಜಿಒಪಿ ರ್ಯಾಲಿ ಸಭೆಯಲ್ಲಿ ತಮ್ಮ ಅಸಮಾಧಾನ ಹೊರ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಕ್ಸಿಕೋ ಅಧ್ಯಕ್ಷ ಹಾಗೂ ನಾನು ಮುಂದಿನ ವಾರ ನಡೆಯಬೇಕಿದ್ದ ನಮ್ಮ ಉದ್ದೇಶಿತ ಭೇಟಿಯನ್ನು ರದ್ದುಗೊಳಿಸಿದ್ದೇವೆ. ಮೆಕ್ಸಿಕೋ ಅಮೆರಿಕವನ್ನು ಸರಿಯಾಗಿ ಗೌರವಯುತವಾಗಿ ನಡೆಸಿಕೊಳ್ಳದ ಹೊರತು ಇಂತಹ ಭೇಟಿಗಳು ಫಲಪ್ರದವಾಗುವುದಿಲ್ಲ ಎಂದು ಹೇಳಿದ್ದರು.
ಅಮೆರಿಕ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಟ್ರಂಪ್ ಆದೇಶ; ಉಭಯ ನಾಯಕರ ವಾಕ್ಸಮರ
ಇನ್ನು ಅಕ್ರಮ ನುಸುಳುಕೋರರನ್ನು ತಡೆಯಲು ಮೆಕ್ಸಿಕೋ-ಅಮೆರಿಕ ಗಡಿಯಲ್ಲಿ ಬೃಹತ್ ಗೋಡೆ ಕಟ್ಟಿಯೇ ತೀರುತ್ತೇನೆ ಎಂದು ಶಪಥ ಮಾಡಿರುವ ಟ್ರಂಪ್ ನಿನ್ನೆಯಷ್ಟೇ ಆದೇಶಕ್ಕೆ ಸಹಿ ಹಾಕಿದ್ದರು. ಅಲ್ಲದೆ ಈ ಗೋಡೆ ನಿರ್ಮಾಣಕ್ಕೆ ತಗುಲುವ ವೆಚ್ಚವನ್ನು ಮೆಕ್ಸಿಕೋದಿಂದಲೇ ಸಂಗ್ರಹಿಸುತ್ತೇವೆ. ಪ್ರಸ್ತುತ ಮೆಕ್ಸಿಕೋ ಹಣ ಪಾವತಿಗೆ ನಿರಾಕರಿಸುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಖಂಡಿತ ಈ ಹಣವನ್ನು ಒಂದಲ್ಲ ಒಂದು ರೀತಿಯಲ್ಲಿ ಮೆಕ್ಸಿಕೋ ದಿಂದಲೇ ಪಡೆಯುತ್ತೇವೆ ಎಂದು ಕಿಡಿಕಾರಿದ್ದರು. ಗೋಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಮೆಕ್ಸಿಕೋ ಅಧ್ಯಕ್ಷ ಎನ್ರಿಕೆ ಪೇನ ನಿಯಟೊ ಅಮೆರಿಕ ಗಡಿಯಲ್ಲಿ ಗೋಡೆ ನಿರ್ಮಿಸುವುದಾದರೆ ನಿರ್ಮಿಸಲಿ. ಆದರೆ ಅದಕ್ಕೆ ಹಣವನ್ನು ನಾವೇಕೆ ನೀಡಬೇಕು. ಯಾವುದೇ ಕಾರಣಕ್ಕೂ ನಾವು ಹಣ ನೀಡುವುದಿಲ್ಲ ಎಂದು ಹೇಳಿದ್ದರು.
ಉಭಯ ನಾಯಕರ ಈ ಧ್ವಂಧ್ವ ನಿಲುವಿನಿಂದಾಗಿ ಅಮೆರಿಕ-ಮೆಕ್ಸಿಕೋ ದೇಶಗಳ ನಡುವಿನ ಸಂಬಂಧದ ಮೇಲೆ ಕರಿಛಾಯೆ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


