ವಿದೇಶ

ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ

ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ಮೂಲದ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕಾಗಿ ಪಾಲೆಸ್ತೀನ್ ರಾಯಭಾರಿಗಳ ವಿರುದ್ಧ ಭಾರತ ಕೆಂಡಾಮಂಡಲವಾಗಿದ್ದು, ಈ ಬಗ್ಗೆ ವಿವರ ನೀಡುವಂತೆ ದೆಹಲಿಯಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರಬರೆದಿದೆ.

ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ಪಾಲೆಸ್ತೀನ್ ರಾಯಭಾರಿಯ ವೇದಿಕೆ ಹಂಚಿಕೆ; ಭಾರತ ಕೆಂಡಾಮಂಡಲ
ಸಂಗ್ರಹ ಚಿತ್ರ
Published On :
ನವದೆಹಲಿ: ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಉಗ್ರಗಾಮಿ ಪಾಕಿಸ್ತಾನ ಮೂಲದ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆ ಹಂಚಿಕೊಂಡ ಕಾರಣಕ್ಕಾಗಿ ಪಾಲೆಸ್ತೀನ್ ರಾಯಭಾರಿಗಳ ವಿರುದ್ಧ ಭಾರತ  ಕೆಂಡಾಮಂಡಲವಾಗಿದ್ದು, ಈ ಬಗ್ಗೆ ವಿವರ ನೀಡುವಂತೆ ದೆಹಲಿಯಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರಬರೆದಿದೆ.
ಪಾಲೆಸ್ತೀನ್ ನ ಪಾಕಿಸ್ತಾನ ರಾಯಭಾರಿ ವಲೀದ್ ಅಬು ಅಲೀ ಅವರು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜೆಯುಡಿ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗೆಗಿನ  ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರ ಭಾರತ ಸರ್ಕಾರದ ಗಮನಕ್ಕೂ ಬಂದಿದ್ದು, ಕೇಂದ್ರ ವಿದೇಶಾಂಗ ಇಲಾಖೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಈ ಬಗ್ಗೆ  ಭಾರತದಲ್ಲಿರುವ ಪಾಲೆಸ್ತೀನ್ ರಾಯಭಾರ ಕಚೇರಿಗೆ ಪತ್ರ ಕೂಡ ಬರೆಯಲಾಗಿದ್ದು, ಪತ್ರದಲ್ಲಿ ಪಾಕಿಸ್ತಾನ ಪಾಲೆಸ್ತೀನ್ ರಾಯಭಾರಿ ಉಗ್ರ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳು  ಲಭ್ಯವಾಗಿವೆ. ಪಾಲೆಸ್ತೀನ್ ಸರ್ಕಾರದಿಂದ ನಾವು ಇದನ್ನು ನಿರೀಕ್ಷಿಸರಲಿಲ್ಲ. ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ವಿವರ ನೀಡುವಂತೆ ವಿದೇಶಾಂಗ ಇಲಾಖೆ ಪತ್ರ ಬರೆದಿದೆ.
ಇನ್ನು ಜೆಯುಡಿ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್ ಸಯ್ಯೀದ್ 26/11 ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದು, ಅಂದು 166 ಮಂದಿಯ ಮಾರಣ ಹೋಮಕ್ಕೆ ಕಾರಣನಾಗಿದ್ದಾನೆ. ಹಫೀಜ್ ಸಯ್ಯೀದ್ ನನ್ನು ಭಾರತ  ಅಂತಾರಾಷ್ಟ್ರೀಯ ಉಗ್ರಗಾಮಿ ಎಂದು ಘೋಷಣೆ ಮಾಡಿದ್ದು, ವಿಶ್ವಸಂಸ್ಥೆಯಲ್ಲೂ ಕೂಡ ಆತನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ಒತ್ತಡ ಹೇರಿದೆ. ಭಾರತದ ಈ ನಿರ್ಧಾರಕ್ಕೆ ಅಮೆರಿಕ ಪರೋಕ್ಷ ಬೆಂಬಲ ನೀಡಿದ್ದರೂ,  ಪಾಕಿಸ್ತಾನದ ಆಪ್ತ ರಾಷ್ಟ್ರ ಚೀನಾ ಮಾತ್ರ ಇದಕ್ಕೆ ಪದೇ ಪದೇ ಅಡ್ಡಗಾಲು ಹಾಕುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.