ಸೌರ ಇಂಧನ ವಿವಾದ: ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತದ ವಿರುದ್ಧ ಮತ್ತೆ ಕೇಸು ಹಾಕಿದ ಅಮೆರಿಕಾ
ಸೌರ ವಿದ್ಯುತ್ ಮೇಲೆ ವಿಶ್ವ ವಾಣಿಜ್ಯ ಸಂಘಟನೆಯ ನಿಯಮವನ್ನು ಪಾಲಿಸುವಲ್ಲಿ ಭಾರತ...

Published On :
ಜೆನೆವಾ: ಸೌರ ವಿದ್ಯುತ್ ಮೇಲೆ ವಿಶ್ವ ವಾಣಿಜ್ಯ ಸಂಘಟನೆಯ ನಿಯಮವನ್ನು ಪಾಲಿಸುವಲ್ಲಿ ಭಾರತ ವಿಫಲವಾಗಿದೆ ಎಂದು ಮುಂದಿನ ತಿಂಗಳು ವಿಶ್ವ ವ್ಯಾಪಾರ ಸಂಘಟನೆಯ ವಿವಾದ ಇತ್ಯರ್ಥ ಮಂಡಳಿಗೆ ಅಮೆರಿಕಾ ತಿಳಿಸಲಿದೆ. ಈ ಮೂಲಕ ಮತ್ತೊಂದು ಸುತ್ತಿನ ದಾವೆ ಹೂಡಲಿದೆ.
ಭಾರತೀಯ ನಿರ್ಮಿತ ಸೆಲ್ಸ್ ಮತ್ತು ಮಾಡ್ಯೂಲ್ಸ್ ಗಳನ್ನು ಬಳಸಲು ಸೌರ ಶಕ್ತಿ ಅಭಿವರ್ದಕರಿಗೆ ನೀಡಲಾಗಿದ್ದ ಒಪ್ಪಂದವನ್ನು ಭಾರತ ಮುರಿದಿದ್ದು ಹೊಸ ವ್ಯಾಜ್ಯ ಆರಂಭಿಸಬೇಕಾಗಿದೆ ಎಂದು ಅಮೆರಿಕಾ ಹೇಳಿದೆ.
2011ರಲ್ಲಿ ಭಾರತ ರಾಷ್ಟ್ರೀಯ ಸೌರ ಕಾರ್ಯಕ್ರಮವನ್ನು ಆರಂಭಿಸಿತ್ತು. ಮಾಲಿನ್ಯ ನಿಯಂತ್ರಣಕ್ಕೆ ಮತ್ತು ಇಂಧನ ಕೊರತೆಯನ್ನು ನೀಗಿಸಲು ಈ ಕ್ರಮ ತೆಗೆದುಕೊಂಡಿತು.
ಆದರೆ 2013ರಲ್ಲಿ ವಿಶ್ವ ವ್ಯಾಪಾರ ಸಂಘಟನೆಗೆ ದೂರು ಸಲ್ಲಿಸಿದ ಅಮೆರಿಕಾ ಕಾರ್ಯಕ್ರಮ ತಾರತಮ್ಯವಾಗಿದ್ದು 2011ರಿಂದ ಭಾರತಕ್ಕೆ ಅಮೆರಿಕಾದಿಂದ ಸೌರ ರಫ್ತಿನಲ್ಲಿ ಶೇಕಡಾ 90ರಷ್ಟು ಕಡಿಮೆಯಾಗಿದೆ ಎಂದು ದೂರಿ ಅರ್ಜಿ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


