ಭಾರತೀಯ ಹ್ಯಾಕರ್ ಗಳಿಂದ ಸರ್ಕಾರಿ ವೆಬ್ ಸೈಟ್ ಗಳ ಹ್ಯಾಕ್, ಸ್ವಾತಂತ್ರ್ಯ ದಿನದಂದೇ ಪಾಕ್ ಗೆ ಶಾಕ್
ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದೇ ಭಾರತೀಯ ಹ್ಯಾಕರ್ಸ್ ಗಳು ಪಾಕಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿದ್ದು, ಬರೊಬ್ಬರಿ 500ಕ್ಕೂ ಹೆಚ್ಚು ಸರ್ಕಾರಿ ವೆಬ್ ಸೈಟ್ ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದೇ ಭಾರತೀಯ ಹ್ಯಾಕರ್ಸ್ ಗಳು ಪಾಕಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿದ್ದು, ಬರೊಬ್ಬರಿ 500ಕ್ಕೂ ಹೆಚ್ಚು ಸರ್ಕಾರಿ ವೆಬ್ ಸೈಟ್ ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪಾಕಿಸ್ಥಾನದ ಸ್ವಾತಂತ್ರ್ಯ ದಿನವಾದ ನಿನ್ನೆ ಅಂದರೆ ಆಗಸ್ಟ್ 14ರಂದು ಭಾರತೀಯ ಹ್ಯಾಕರ್ ಗಳು ಪಾಕಿಸ್ತಾನ ಸರ್ಕಾರದ ಕೆಲ ಪ್ರಮುಖ ವೆಬ್ ಸೈಟ್‌ಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ, ವಿರೂಪಗೊಳಿಸಿ ಭಾರತ ಪರ ವಿಷಯಗಳನ್ನು ಅವುಗಳಲ್ಲಿ ತುಂಬಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಸರ್ಕಾರದ ರಕ್ಷಣಾ ಸಚಿವಾಲಯ, ಹವಾಮಾನ ಬದಲಾವಣೆ ಸಚಿವಾಲಯ, ಅಂತರ್ ಪ್ರಾಂತೀಯ ಸಂಚಾಲನ ಸಚಿವಾಲಯ, ನೀರು ಮತ್ತು ವಿದ್ಯುತ್ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೇರಿದಂತೆ ಇನ್ನೂ ಕೆಲವು ವೆಬ್ ಸೈಟ್‌ಗಳ ಮೇಲೆ ಭಾರತೀಯ ಹ್ಯಾಕರ್‌ಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಹ್ಯಾಕ್ ಆದ ವಿಚಾರ ತಿಳಿಯುತ್ತಿದ್ದಂತೆಯೇ ಪಾಕಿಸ್ತಾನ ಸರ್ಕಾರ ಪ್ರಮುಖ ವೆಬ್ ಸೈಟ್ ಗಳನ್ನು ರಿಸ್ಟೋರ್ ಮಾಡಿದೆಯಾದರೂ, ಇನ್ನೂ ಕೆಲ ಪ್ರಮುಖ ವೆಬ್ ಸೈಟ್ ಗಳು ಇನ್ನೂ ಹ್ಯಾಕ್ ಆದ ಸ್ಥಿತಿಯಲ್ಲೇ ಇವೆ ಎಂದು ತಿಳಿದುಬಂದಿದೆ. ಈ ವೆಬ್ ಸೈಟ್ ಗಳನ್ನು ತೆರೆದರೆ "ವೆಬ್ ಸೈಟ್ ದುರಸ್ತಿಯಲ್ಲಿದೆ" ಎಂಬ ಬರಹಗಳು ಕಾಣುತ್ತಿವೆ.
ಮೂಲಗಳ ಪ್ರಕಾರ "ಲುಲುಸೆಕ್ ಇಂಡಿಯಾ' ಎಂಬ ಹ್ಯಾಕರ್ಸ್ ಗಳ ತಂಡ ಈ ದಾಳಿ ಮಾಡಿರುವ ಶಂಕೆ ಇದೆ ಎಂದು ಪಾಕ್ ಮಾಹಿತಿ ತಂತ್ರಜ್ಞಾನದ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಈ ದಾಳಿಯ ಬಗ್ಗೆ ಇನ್ನೂ ಯಾವುದೇ ರೀತಿಯ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಹಿಂದೆ ಪಾಕಿಸ್ತಾನ ಹ್ಯಾಕರ್ಸ್ ಗಳ ದಾಳಿಯಿಂದಾಗಿ ಭಾರತ ತತ್ತರಿಸುತ್ತಿತ್ತು. ಇದೀಗ ಭಾರತೀಯ ಹ್ಯಾಕರ್ಸ್ ಗಳ ದಾಳಿಯಿಂದಾಗಿ ಪಾಕಿಸ್ತಾನ ಹೈರಾಣಾಗುತ್ತಿದೆ. ಇನ್ನು ಪಾಕಿಸ್ತಾನಿ ಸರ್ಕಾರಿ ವೆಬ್ ಸೈಟ್ ಗಳ ಮೇಲೆ ಭಾರತೀಯ ಹ್ಯಾಕರ್ಸ್ ಗಳು ದಾಳಿ ಮಾಡಿರುವುದು ಇದೇ ಮೊದಲೇನಲ್ಲ. 2016ರ ಅಕ್ಟೋಬರ್‌ನಲ್ಲಿ ಪಾಕ್ ಸರ್ಕಾರದ ಕಂಪ್ಯೂಟರ್ ಜಾಲದ ಕೆಲವೊಂದು ಮುಖ್ಯ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


