ವಿದೇಶ

ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಭಾರತ ಭೇಟಿ ನವೆಂಬರ್ ನಲ್ಲಿ

ನವೆಂಬರ್ ಅಂತ್ಯಕ್ಕೆ ಹೈದರಾಬಾದ್ ನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ....

ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಭಾರತ ಭೇಟಿ ನವೆಂಬರ್ ನಲ್ಲಿ
ಇವಾಂಕಾ ಟ್ರಂಪ್
Published On :
ನವದೆಹಲಿ: ನವೆಂಬರ್ ಅಂತ್ಯಕ್ಕೆ ಹೈದರಾಬಾದ್ ನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ.
ಈ ಶೃಂಗಸಭೆಯ ಅಮೆರಿಕ ನಿಯೋಗದ ಮುಂದಾಳತ್ವ ವಹಿಸುವಂತೆ ಕಳೆದ ಬಾರಿ ಅಮೆರಿಕಾಕ್ಕೆ ಭೇಟಿ ನೀಡಿದ್ದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವಾಂಕಾರನ್ನು ಆಹ್ವಾನಿಸಿದ್ದರು. ಇದಕ್ಕೆ ಪ್ರತಿಯಾಗಿ ಇವಾಂಕಾ ಪ್ರಧಾನಿಗೆ ಧನ್ಯವಾದ ತಿಳಿಸಿದ್ದರು.
ಅಮೆರಿಕಾದಲ್ಲಿ ವಾಣಿಜ್ಯೋದ್ಯಮಿಯಾಗಿರುವ ಇವಾಂಕಾ ಟ್ರಂಪ್ ಮಾಜಿ ಫ್ಯಾಶನ್ ಮಾಡೆಲ್ ಕೂಡ ಹೌದು. ತನ್ನ ತಂದೆಯ ರಾಜಕೀಯದಲ್ಲಿಯೂ ಅಲ್ಪಸ್ವಲ್ಪ ಸಹಾಯ ಮಾಡುತ್ತಾರೆ.
ತನ್ನ ಪತಿ ಜೇರ್ಡ್ ಕುಶ್ನರ್ ಜೊತೆ ಅಮೆರಿಕಾ ಸರ್ಕಾರದಲ್ಲಿ ಪ್ರಮುಖ ಸಲಹಾಗಾರ್ತಿಯಾಗಿದ್ದರೂ ಕೂಡ ರಾಜಕೀಯದಿಂದ ದೂರವುಳಿಯಲು ಪ್ರಯತ್ನಿಸುತ್ತೇನೆ ಎಂದು 35 ವರ್ಷದ ಇವಾಂಕಾ ಹೇಳುತ್ತಾರೆ.
ಸುಮಾರು 300 ದಶಲಕ್ಷ ಡಾಲರ್ ಸಂಪತ್ತು ಹೊಂದಿರುವ ಇವಾಂಕಾ ತಂದೆಗೆ ರಾಜಕೀಯದಲ್ಲಿ ಸಲಹಾಗಾರ್ತಿಯಾಗಿದ್ದರೂ ಕೂಡ ಅದಕ್ಕೆ ಸರ್ಕಾರದಿಂದ ವೇತನ ಪಡೆಯುವುದಿಲ್ಲ. ಆಕೆಯ ಪತಿ ಕೂಡ ಪಡೆಯುವುದಿಲ್ಲ.ಸರ್ಕಾರದ ಕೆಲವು ಸಮಸ್ಯೆಗಳಿಗೆ ಆಕೆ ತನ್ನ ತಂದೆಗೆ ಪ್ರಾಮಾಣಿಕ ಮತ್ತು ಮುಕ್ತ ಸಲಹೆ ನೀಡುತ್ತಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.