ವಿದೇಶ

ಗೂಢಾಚಾರರ ಬಗ್ಗೆ ಮಾಹಿತಿಗೆ ಬೃಹತ್ ಹಣದ ಬಹುಮಾನ ಘೋಷಿಸಿದ ಬೀಜಿಂಗ್

ವಿದೇಶಿ ಗೂಢಾಚಾರರ ಬಗ್ಗೆ ಮಾಹಿತಿ ಒದಗಿಸಿದವರಿಗೆ ದೊಡ್ಡ ಮೊತ್ತದ ಹಣದ ಬಹುಮಾನವನ್ನು ಬೀಜಿಂಗ್ ಸರ್ಕಾರ ಘೋಷಿಸಿರುವುದಾಗಿ ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.

ಗೂಢಾಚಾರರ ಬಗ್ಗೆ ಮಾಹಿತಿಗೆ ಬೃಹತ್ ಹಣದ ಬಹುಮಾನ ಘೋಷಿಸಿದ ಬೀಜಿಂಗ್
ಸಾಂದರ್ಭಿಕ ಚಿತ್ರ
Published On :
ಬೀಜಿಂಗ್: ವಿದೇಶಿ ಗೂಢಾಚಾರರ ಬಗ್ಗೆ ಮಾಹಿತಿ ಒದಗಿಸಿದವರಿಗೆ ದೊಡ್ಡ ಮೊತ್ತದ ಹಣದ ಬಹುಮಾನವನ್ನು ಬೀಜಿಂಗ್ ಸರ್ಕಾರ ಘೋಷಿಸಿರುವುದಾಗಿ ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ. ಈ ಬಹುಮಾನದ ಗರಿಷ್ಠ ಮೊತ್ತ ೫,೦೦,೦೦೦ ಯಾನ್ (೭೨, ೪೬೦ ಡಾಲರ್) ಎನ್ನಲಾಗಿದೆ. 
ಚೈನಾದ ರಾಜಧಾನಿಯ ನಾಗರಿಕರು, ಹಾಟ್ ಲೈನ್ ಮೂಲಕ ಅಥವಾ ಪತ್ರಗಳನ್ನು ಬರೆಯುವುದರ ಮೂಲಕ ಅಥವಾ ನಗರ ಭದ್ರತಾ ಬ್ಯುರೋಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. 
ಈ ಮಾಹಿತಿಯನ್ನು ಕ್ರೋಢೀಕರಿಸಿದ ನಂತರ ಅದರ ಉಪಯುಕ್ತತೆಯ ಆಧಾರದ ಮೇರೆಗೆ ಬ್ಯುರೋ ೧೦,೦೦೦ ಯಾನ್ ನಿಂದ ೫,೦೦,೦೦೦ ಯಾನ್ ನಷ್ಟು ಹಣದ ಬಹುಮಾನ ನೀಡುತ್ತದೆ ಎಂದು ತಿಳಿದುಬಂದಿದೆ. 
ಈ ಮಾಹಿತಿ ನೀಡುವ ಜನರ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಅಥವಾ ಅವರ ಒಪ್ಪಿಗೆ ಇಲ್ಲದೆ ಬಹಿರಂಗಪಡಿಸುವುದಿಲ್ಲ. ಈ ಮಾಹಿತಿ ನೀಡಿದ್ದಕ್ಕೆ ಮಾಹಿತಿದಾರರಿಗೆ ಆಗಲಿ ಅವರ ಸಂಬಂಧಿಗಳಿಗೆ ಆಗಲಿ ಯಾವುದೇ ರೀತಿಯ ಅಪಾಯ ಎದುರಾದರೆ ಅವರು ಭದ್ರತಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. 
ಆದರೆ ಮತ್ತೊಬ್ಬರ ಮಾನಹರಣ ಮಾಡಲು ಬೇಕೆಂದೇ ತಪ್ಪು ಮಾಹಿತಿ ನೀಡಿದ್ದಲ್ಲಿ, ಅಥವಾ ತಪ್ಪು ಮಾಹಿತಿ ಸೃಷ್ಟಿಸಿ ಹರಡಿದ್ದಲ್ಲಿ ಅಂತಹವರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ತಿಳಿಯಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.