ಭಾರತದೊಂದಿಗೆ ಸ್ಪರ್ಧೆಗಿಳಿದ ಚೀನಾ; ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆ ಸಿದ್ಧ!
ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ನೆರೆಯ ಚೀನಾ ದೇಶ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆಯನ್ನು ಸಿದ್ಧಪಡಿಸಿದೆ.

ಬೀಜಿಂಗ್: ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ನೆರೆಯ ಚೀನಾ ದೇಶ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆಯನ್ನು ಸಿದ್ಧಪಡಿಸಿದೆ.
ಚೀನಾ ರಾಜಧಾನಿ ಪೂರ್ವ ಬೀಜಿಂಗ್ ನ ಡಲಿಯಾನ್ ದ್ವೀಪದಲ್ಲಿ ನಿರ್ಮಾಣ ಮಾಡಲಾಗುತ್ತಿರುವ "ಟೈಪ್ 001-ಎ" ನೌಕೆಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಯುದ್ಧ ನೌಕೆಗೆ ರಾಡಾರ್ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಖಾಸಗಿ ಸುದ್ದಿಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಸಾರ ಮಾಡಿದ್ದು, ಕಳೆದ ವರ್ಷ ಆರಂಭಿಕ ಹಂತದಲ್ಲಿದ್ದ ಯುದ್ಧ ನೌಕೆ ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದೆ. ಇನ್ನು ಕೆಲವೇ ವಾರಗಳಲ್ಲಿ ಯುದ್ಧ ವಿಮಾನ ಹೊತ್ತೊಯ್ಯಬಲ್ಲ ಈ ನೌಕೆಯನ್ನು ಪರೀಕ್ಷಾರ್ಥ ಚಾಲನೆ ಮಾಡುವ ಸಾಧ್ಯತೆ ಇದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಮೂಲಗಳ ಪ್ರಕಾರ ಚೀನಾದ ಮೊಟ್ಟಮೊದಲ ಸ್ವದೇಶಿ ನಿರ್ಮಾಣ ಯುದ್ಧನೌಕೆ ಎಂದು ಹೇಳಲಾಗುತ್ತಿರುವ "ಟೈಪ್ 001-ಎ" ನೌಕೆಯು ಸುಮಾರು 60 ಸಾವಿರ ಟನ್ ತೂಕ ಹೊಂದಿದ್ದು, 36 ಜೆ-15 ಯುದ್ಧ ವಿಮಾನಗಳನ್ನು ಒಳಗೊಂಡಂತೆ 50 ವಿಮಾನಗಳನ್ನು ಏಕಕಾಲದಲ್ಲಿ ಹೊತ್ತಯ್ಯುವ ಸಾಮರ್ಥ್ಯ ಹೊಂದಿದೆ. ಅಂತೆಯೇ ಈ ಯುದ್ಧ ನೌಕೆಗೆ ಅತ್ಯಾಧುನಿಕ ಎಲೆಕ್ಟ್ರೋ ಮ್ಯಾಗ್ನೆಟಿಕ್ ಎರ್ ಕ್ರಾಫ್ಟ್ ಲಾಂಚ್ ಸಿಸ್ಟಮ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಇನ್ನು ಚೀನಾ ಸೇನಾ ಮೂಲಗಳ ಪ್ರಕಾರ 2020ರೊಳಗೆ ಈ ಯುದ್ಧ ನೌಕೆಯನ್ನು ಚೀನಾ ಸೇನಾಗೆ ಸೇರ್ಪಡೆಗೊಳಿಲಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದೀಗ ಈ ಯುದ್ಧ ನೌಕೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


