ವಿದೇಶ

ವಿಶ್ವದಲ್ಲಿಯೇ ಭಾರತವನ್ನು ಮುಕ್ತ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವುದು ನನ್ನ ನಿರ್ಧಾರ: ಪ್ರಧಾನಿ ಮೋದಿ

ಜಪಾನ್ ದೇಶದ ಹೂಡಿಕೆದಾರರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ...

ವಿಶ್ವದಲ್ಲಿಯೇ ಭಾರತವನ್ನು ಮುಕ್ತ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವುದು ನನ್ನ ನಿರ್ಧಾರ: ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಪಾನ್ ನ ದೊರೆ ಅಕಿಹಿಟೊ ಅವರೊಂದಿಗೆ ಟೊಕ್ಯೊದ ಇಂಪರಿಯಲ್ ಪ್ಯಾಲೇಸ್ ನಲ್ಲಿ ಮಾತುಕತೆಯಲ್ಲಿ ತೊಡಗಿದ್ದ ಕ್ಷಣ
Published On :
ಟೋಕ್ಯೋ: ಜಪಾನ್ ದೇಶದ ಹೂಡಿಕೆದಾರರನ್ನು ಭಾರತಕ್ಕೆ ಸ್ವಾಗತಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತಕ್ಕೆ ಹೆಚ್ಚು ಮತ್ತು ಗಣನೀಯ ಪ್ರಮಾಣದ ಹಣಕಾಸಿನ ಅಗತ್ಯವಿದ್ದು ವಿಶ್ವದಲ್ಲಿ ಅತ್ಯಂತ ಮುಕ್ತ ಆರ್ಥಿಕ ರಾಷ್ಟ್ರವನ್ನಾಗಿ ಭಾರತವನ್ನು ಮಾಡಲು ತಮ್ಮ ಸರ್ಕಾರ ಸುಧಾರಣಾ ನೀತಿಗಳನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.
ಅವರು ಇಂದು ಭಾರತ-ಜಪಾನ್ ಉದ್ಯಮ ನಾಯಕರ ವೇದಿಕೆಯಲ್ಲಿ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿ, ಸರಕು ಮತ್ತು ಸೇವಾ ತೆರಿಗೆಯ ಬೆಳವಣಿಗೆಗಳನ್ನು ಹೇಳಿದರು. ಭಾರತದಲ್ಲಿ ಹೂಡಿಕೆ ಮತ್ತು ವ್ಯಾಪಾರ, ವಹಿವಾಟುಗಳನ್ನು ಸುಲಭವಾಗಿ ವಿದೇಶಿಗರು ನಡೆಸಲು ಸರ್ಕಾರ ತಂದಿರುವ ಅನೇಕ ಸುಧಾರಣಾ ಯೋಜನೆಗಳು ಮತ್ತು ಕಾನೂನುಗಳ ಬಗ್ಗೆಯೂ ತಿಳಿಸಿದರು.
ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲು ತಮ್ಮ ಸರ್ಕಾರ ಬದ್ಧವಾಗಿದ್ದು ಸ್ಥಿರ ಮತ್ತು ಪಾರದರ್ಶಕ ನಿಯಂತ್ರಕ ಪ್ರಕ್ರಿಯೆಗಳ ಮೂಲಕ ಉತ್ತಮ ವಾಣಿಜ್ಯ ವಹಿವಾಟುಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಭಾರತ ಆರ್ಥಿಕ ಸುಧಾರಣೆಯ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದೆ. ವಿಶ್ವದಲ್ಲಿಯೇ ಭಾರತವನ್ನು ಅತ್ಯಂತ ಮುಕ್ತ ಆರ್ಥಿಕತೆಯನ್ನಾಗಿ ಮಾಡುವುದು ನನ್ನ ನಿರ್ಧಾರ ಎಂದು ಹೇಳಿದರು.
ಭಾರತದ ಅಭಿವೃದ್ಧಿಗೆ ದೊಡ್ಡ ಮತ್ತು ಗಣನೀಯ ಪ್ರಮಾಣದ ಆರ್ಥಿಕತೆ ಬೇಕು. ಭಾರತದಲ್ಲಿ ಜಪಾನ್ ನ ಕಂಪೆನಿಗಳಿಗೆ ಹೂಡಿಕೆ ಮಾಡಿ ವ್ಯವಹಾರ ನಡೆಸಲು ಅಸಂಖ್ಯಾತ ಅವಕಾಶಗಳಿವೆ. ನಮ್ಮ ಅಭಿವೃದ್ಧಿಯ ಪ್ರಾಮುಖ್ಯತೆಗಳಿಗೆ ವೇಗದ ಸಾಧನೆಯನ್ನು ಬಯಸುತ್ತೇವೆ, ಅದು ಪರಿಸರ ಸ್ನೇಹಿ ಕ್ರಮದಲ್ಲಿರಬೇಕು. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಭಾರತದ ಪರಾಕ್ರಮ ಜಪಾನ್ ನ ಹಾರ್ಡ್ ವೇರ್ ಕ್ಷೇತ್ರದಲ್ಲಿನ ಶಕ್ತಿಯೊಂದಿಗೆ ತುಲನೆ ಮಾಡಲಾಗುತ್ತದೆ. ಭಾರತದಲ್ಲಿ ಜಪಾನೀಯರಿಗೆ ಉತ್ತಮ ವೇದಿಕೆ, ಅವಕಾಶ ನಿರ್ಮಿಸಿಕೊಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.