ಭಾರತ-ಇರಾನ್ ನಡುವಿನ ಚಾಬಹಾರ್ ಬಂದರು ಒಪ್ಪಂದ ಪ್ರಶ್ನಿಸಿದ ಅಮೆರಿಕ
ಭಾರತ- ಇರಾನ್ ನಡುವೆ ಏರ್ಪಟ್ಟಿರುವ ಚಾಬಹಾರ್ ಬಂದರು ನಿರ್ಮಾಣ ಒಪ್ಪಂದದ ಬಗ್ಗೆ ಅಮೆರಿಕ ಪ್ರಶ್ನಿಸಿದೆ.

ವಾಷಿಂಟ್ ಟನ್: ಭಾರತ- ಇರಾನ್ ನಡುವೆ ಏರ್ಪಟ್ಟಿರುವ ಚಾಬಹಾರ್ ಬಂದರು ನಿರ್ಮಾಣ ಒಪ್ಪಂದದ ಬಗ್ಗೆ ಅಮೆರಿಕ ಪ್ರಶ್ನಿಸಿದ್ದು, ಈ ಒಪ್ಪಂದದ ಯೋಜನೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
ಮೋದಿ ಭೆಟಿಯ ವೇಳೆ ಏರ್ಪಟ್ಟ ಒಪ್ಪಂದದ ಬಗ್ಗೆ ಮಾತನಾಡಿರುವ ಅಮೆರಿಕದ ದಕ್ಷಿಣ ಹಾಗೂ ಮಧ್ಯ ಪ್ರಾಚ್ಯ ವ್ಯವಹಾರಗಳ ಇಲಾಖೆಯ ಅಧಿಕಾರಿ ನಿಶಾ ದೇಶಾಯಿ ಬಿಸ್ವಾಲ್, ಚಾಬಹಾರ್ ಬಂದರು ನಿರ್ಮಾಣದ ಒಪ್ಪಂದವನ್ನು ಅಮೆರಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಹಾಗೂ ಯುರೋಪ್ ಇತ್ತೀಚೆಗಷ್ಟೇ ಇರಾನ್ ಮೇಲೆ ವಿಧಿಸಿದ್ದ ನಿರ್ಭಂಧಗಳನ್ನು ತೆರವುಗೊಳಿಸಿತ್ತು ಆದರೆ ವ್ಯಾಪಾರ ವಹಿವಾಟು ಸೇರಿದಂತೆ ಕೆಲವೊಂದು ಕ್ಷೇತ್ರಗಳಿಗೆ ನಿರ್ಬಂಧ ಈಗಲೂ ಅನ್ವಯವಾಗಲಿದ್ದು, ಇರಾನ್ ನೊಂದಿಗಿನ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ಅಮೆರಿಕ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಎಂದು ನಿಶಾ ದೇಶಾಯಿ ಬಿಸ್ವಾಲ್ ತಿಳಿಸಿದ್ದಾರೆ. ಇರಾನ್ ನೊಂದಿಗಿನ ಭಾರತದ ಸಂಬಂಧ ಆರ್ಥಿಕ ಹಾಗೂ ವಿದ್ಯುತ್ ಕ್ಷೇತ್ರಗಳನ್ನು ಉದ್ದೇಶಿಸಿದೆ.ಆದರೆ ಭಾರತ ಇರಾನ್ ನೊಂದಿಗೆ ಸೇನೆ ಸಹಕಾರಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದ ನಡೆದರೂ ಅದು ಅಮೆರಿಕಗೆ ಆತಂಕಕಾರಿ ಬೆಳವಣಿಗೆಯಾಗಿರಲಿದೆ ಎಂದು ಅಮೆರಿಕದ ಅಧಿಕಾರಿ ಸೂಕ್ಷ್ಮವಾಗಿ ಭಾರತ- ಇರಾನ್ ನಡುವೆ ನಡೆದಿರುವ ಚಾಬಹಾರ್ ಬಂದರು ಒಪ್ಪಂದವನ್ನು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


