ವಿದೇಶ

ಪಾಕ್‌ನಲ್ಲಿ ಹಿಂದೂ ದೇವಾಲಯಗಳನ್ನು ಕೆಡವಲು ಬಿಡುವುದಿಲ್ಲ: ಉಗ್ರ ಹಫೀಸ್

ಭಾರತವನ್ನು ನಾಶಪಡಿಸಲು ಮುಂದಾಗಿರುವ ಉಗ್ರ ಸಂಘಟನೆಗಳ ಪೈಕಿ ಪಾಕಿಸ್ತಾನದಿಂದ ನಿಷೇಧಗೊಂಡಿರುವ ಜಮಾತ್ ಉದ್ ದವಾ(ಜೆಯುಡಿ) ಒಂದು. ಅದರ ಮುಖ್ಯಸ್ಥ ಹಫೀಸ್...

ಪಾಕ್‌ನಲ್ಲಿ ಹಿಂದೂ ದೇವಾಲಯಗಳನ್ನು ಕೆಡವಲು ಬಿಡುವುದಿಲ್ಲ: ಉಗ್ರ ಹಫೀಸ್
ಹಫೀಸ್ ಸಯ್ಯೀದ್
Published On :

ಭಾರತವನ್ನು ನಾಶಪಡಿಸಲು ಮುಂದಾಗಿರುವ ಉಗ್ರ ಸಂಘಟನೆಗಳ ಪೈಕಿ ಪಾಕಿಸ್ತಾನದಿಂದ ನಿಷೇಧಗೊಂಡಿರುವ ಜಮಾತ್ ಉದ್ ದವಾ(ಜೆಯುಡಿ) ಒಂದು. ಅದರ ಮುಖ್ಯಸ್ಥ ಹಫೀಸ್ ಸಯ್ಯೀದ್ ಪಾಕ್‌ನಲ್ಲಿ ಹಿಂದೂ ದೇವಾಲಯಗಳನ್ನು ಕೆಡವಲು ಬಿಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾನೆ.

ಪಾಕಿಸ್ತಾನದ ಸಿಂಧು ಪ್ರಾಂತ್ಯದ ಮಲ್ಟಿ ಟೌನ್ ನಲ್ಲಿ ಮಾತನಾಡಿದ ಹಫೀಸ್ ಸಯ್ಯೀದ್ ಪಾಕಿಸ್ತಾನದಲ್ಲಿನ ಮುಸ್ಲಿಂಯೇತರ ಸಮುದಾಯದ ದೇವಾಲಯಗಳನ್ನು ಉಳಿಸುವುದು ಮುಸ್ಲಿಂರ ಜವಾಬ್ದಾರಿ. ಹೀಗಾಗಿ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳು ಹಾಗೂ ಪವಿತ್ರ ಸ್ಥಳಗಳನ್ನು ನಾಶ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾನೆ.

ಇನ್ನು ಭಾರತದ ಗಡಿಯಲ್ಲಿರುವ ಸಿಂಧು ಪಾಂತ್ಯದಲ್ಲಿ ಉಗ್ರತ್ವವನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಹಫೀಸ್ ಸಯ್ಯೀದ್ ತಳ್ಳಿ ಹಾಕಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.