ವಿದೇಶ

ತಾರಕ್ಕೇರಿದ ಯೆಮೆನ್ ಬಿಕ್ಕಟ್ಟು; ಅಡೆನ್ ಆತ್ಮಾಹುತಿ ಬಾಂಬ್ ದಾಳಿಗೆ 25ಕ್ಕೂ ಹೆಚ್ಚು ಬಲಿ

ಯೆಮೆನ್ ರಾಜಧಾನಿ ಅಡೆನ್​ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...

ತಾರಕ್ಕೇರಿದ ಯೆಮೆನ್ ಬಿಕ್ಕಟ್ಟು; ಅಡೆನ್ ಆತ್ಮಾಹುತಿ ಬಾಂಬ್ ದಾಳಿಗೆ 25ಕ್ಕೂ ಹೆಚ್ಚು ಬಲಿ
ಅಡೆನ್ ನಲ್ಲಿ ಬಾಂಬ್ ಸ್ಫೋಟ (ಸಂಗ್ರಹ ಚಿತ್ರ)
Published On :

ಮಧ್ಯಪ್ರಾಚ್ಯ: ಯೆಮೆನ್ ರಾಜಧಾನಿ ಅಡೆನ್​ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ  ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯೆಮೆನ್ ದೇಶದ ಆಂತರಿಕ ಬಿಕ್ಕಟ್ಟು ತಾರಕ್ಕೇರಿದ್ದು ನಿನ್ನೆ ರಾತ್ರಿ ಪ್ರತ್ಯೇಕತಾವಾದಿಗಳು ಸಿಡಿಸಿದ 3 ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಎಡೆನ್​ನ  ಬುರೈಗಾದಲ್ಲಿರುವ 100ಕ್ಕೂ ಹೆಚ್ಚು ಸೈನಿಕರಿದ್ದ ಮಿಲಿಟರಿ ಕೇಂದ್ರವನ್ನು ಗುರಿಯಾಗಿಸಿಕೊಂಡು ಇಬ್ಬರು ಆತ್ಮಾಹುತಿ ಬಾಂಬರ್ ಗಳು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ  ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಅಡೆನ್ ನಲ್ಲಿರುವ ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆ್ಯಂಬುಲೆನ್ಸ್ ನಲ್ಲಿ ಬಂದ ಓರ್ವ ಆತ್ಮಹತ್ಯಾ ಬಾಂಬರ್ ಯೆಮೆನ್ ಮಿಲಿಟರಿ ಕೇಂದ್ರದ ಸಮೀಪಕ್ಕೆ ಬಂದು ಸ್ಫೋಟಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಗಾಯಗೊಂಡ  ಗಾಯಾಳುಗಳನ್ನು ಸೇನಾಕೇಂದ್ರಕ್ಕೆ ಸಾಗಿಸುತ್ತಿದ್ದಾಗ ಅದೇ ನೆಪದಲ್ಲಿ ಬಂದ ಮತ್ತಿಬ್ಬರು ಆತ್ಮಹತ್ಯಾ ಬಾಂಬರ್ ಗಳು ಸೇನಾ ಕೇಂದ್ರದ ಒಳಗೆ ತಮ್ಮನ್ನು ತಾವು ಸ್ಫೋಟಿಸಿಕೊಳ್ಳವ ಮೂಲಕ  ಸಾವಿನ ಸಂಖ್ಯೆ ಹೆಚ್ಚಾಗುವಂತೆ ಮಾಡಿದ್ದಾರೆ.

ತಿಂಗಳ ಹಿಂದೆಯಷ್ಟೇ ಅಡೆನ್​ನ ಮಾಜಿ ರಾಜ್ಯಪಾಲ ಸೇರಿದಂತೆ ಹಲವಾರು ಉನ್ನತ ಶ್ರೇಣಿಯ ಭದ್ರತಾ ಅಧಿಕಾರಿಗಳನ್ನು ಹಾಗೂ ನ್ಯಾಯಾಧೀಶರನ್ನು ಹತ್ಯೆಗೈಯ್ಯಲಾಗಿತ್ತು. ಬೆಂಗಳೂರಿನ  ಪಾದ್ರಿ ಡಾ.ಟಾಮ್ ರನ್ನು ಕೂಡ ಉಗ್ರರು ಅಪಹರಿಸಿದ್ದು ಇದೇ ಬುರೈಗಾ ನಗರದಿಂದಲೇ. ಮಾರ್ಚ್ 4ರಂದು ಡಾ.ಟಾಮ್ ಕಾರ್ಯನಿರ್ವಹಿಸುತ್ತಿದ್ದ ಮಿಷನರಿ ಮೇಲೆ ದಾಳಿ ನಡೆಸಿದ  ಬಂಧೂಕುಧಾರಿಗಳು ಟಾಮ್ ರನ್ನು ಅಪಹರಿಸಿದ್ದಾರೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.