ಇಸಿಸ್ ರಾಸಾಯನಿಕ ಅಸ್ತ್ರ ಪ್ರಯೋಗ: ಬಾಲಕಿ ಸಾವು, 600 ಜನರು ಗಂಭೀರ
ಇರಾಕ್ ನಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆಯ ಕುಕೃತ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ಇಸಿಸ್ ನಡೆಸಿದ ರಾಸಾಯನಿಕ ಅಸ್ತ್ರ ಪ್ರಯೋಗದಿಂದಾಗಿ ಓರ್ವ ಪುಟ್ಟ ಬಾಲಕಿ ಸಾವನ್ನಪ್ಪಿದ್ದು, ಸುಮಾರು 600 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ...

ಬಾಗ್ದಾದ್: ಇರಾಕ್ ನಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆಯ ಕುಕೃತ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ಇಸಿಸ್ ನಡೆಸಿದ ರಾಸಾಯನಿಕ ಅಸ್ತ್ರ ಪ್ರಯೋಗದಿಂದಾಗಿ ಓರ್ವ ಪುಟ್ಟ ಬಾಲಕಿ ಸಾವನ್ನಪ್ಪಿದ್ದು, ಸುಮಾರು 600 ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸಿಸ್ ಉಗ್ರಗಾಮಿ ಸಂಘಟನೆಯ ಬಿಗಿ ಹಿಡಿತವಿರುವ ತಾಝಾ ಪಟ್ಟಣದಲ್ಲಿ ಐಎಸ್ ಉಗ್ರರ ನಿಗ್ರಹ ಸಂಬಂಧ ಇರಾಕ್ ನ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಎರಡು ರಾಸಾಯನಿಕ ಅಸ್ತ್ರಗಳೊಂದಿಗೆ ದಾಳಿ ನಡೆಸಿದ ಉಗ್ರರು, ನೂರಾರು ಮಂದಿಗೆ ತೊಂದರೆ ಮಾಡಿದ್ದಾರೆ ಎಂದು ಇರಾಕ್ ಉನ್ನತ ಆಡಳಿತ ಮೂಲಗಳು ತಿಳಿಸಿವೆ. ಕೀರ್ಕುಕ್ ಪ್ರಾಂತ್ಯದಲ್ಲಿ ಷಿಯಾ ಉಗ್ರರು ಐಎಸ್ ಉಗ್ರರ ವಿರುದ್ಧ ಹೋರಾಡುತ್ತಿದ್ದು, ಈ ಸಂಘಟನೆಯ ಸಮೀರ್ ಎಂಬಾತನ ಪುತ್ರಿ 3 ವರ್ಷದ ಫಾತಿಮಾ ಎಂಬ ಪುಟ್ಟ ಬಾಲಕಿ ರಾಸಾಯನಿಕ ಆಸ್ತ್ರದ ಪ್ರಭಾವದಿಂದ ಮೃತಪಟ್ಟಿದ್ದಾಳೆ.
ಶನಿವಾರ ಮುಂಜಾನೆ ಈ ದಾಳೆ ನಡೆದಿದ್ದು, ವಿಚಾರ ತಿಳಿಯುತ್ತಿದ್ದಂತೆ ಬಾಲಕಿ ತಂದೆ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಸಂಜೆಯಾಗುತ್ತಲೇ ಮಗುವಿನ ದೇಹ ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಗುವನ್ನು ಉಳಿಸಿಕೊಳ್ಳಲು ಬಾಲಕಿ ವೈದ್ಯರು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದು ಬಾಲಕಿ ತಂದೆ ಹೇಳಿದ್ದಾರೆ. ಇನ್ನು ಈ ರಾಸಾಯನಿಕ ಅಸ್ತ್ರದ ದಾಳಿಯಲ್ಲಿ ಗಾಯಗೊಂಡ ಇನ್ನೂ 9 ಮಂದಿಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆ ಬಹಿರಂಗವಾಗುತ್ತಿದ್ದಂತೆಯೇ ಇರಾಕ್ ನ ತಾಝಾ ಪಟ್ಟಣಕ್ಕೆ ಅಮೆರಿಕ ಮತ್ತು ಜರ್ಮನಿಯ ನುರಿತ ತಜ್ಞರು ದೌಡಾಯಿಸಿದ್ದು, ಪರಿಸ್ಥಿತಿಯ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಉಗ್ರರು ಕ್ಲೋರಿನ್ ಮತ್ತು ಕಳಪೆ ಗುಣಮಟ್ಟದ ಸಲ್ಫರ್ ಬಳಕೆ ಮಾಡಿರುವ ಶಂಕೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇತ್ತ ಅಮೆರಿಕ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಉಗ್ರರಿಂದ ರಾಸಾಯನಿಕ ಅಸ್ತ್ರ ಬಳಕೆ ವಿಚಾರವನ್ನು ಸಣ್ಣ ವಿಷಯವಾಗಿ ತಿಳಿದಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಸೇನೆಯ ಹಿರಿಯ ಅಧಿಕಾರಿ ಸ್ಟೀವ್ ವಾರೆನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


