ವಿದೇಶ

ಉತ್ತರ ಕೊರಿಯಾ ಜಗತ್ತಿಗೆ ಬೆದರಿಕೆ ಒಡ್ಡಿದೆ: ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ

ಜಲಜನಕ ಬಾಂಬ್ ಸ್ಫೋಟ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ಜಗತ್ತಿಗೆ ಪ್ರತ್ಯಕ್ಷ್ಯ ಬೆದರಿಕೆಯೊಡ್ಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು...

ಉತ್ತರ ಕೊರಿಯಾ ಜಗತ್ತಿಗೆ ಬೆದರಿಕೆ ಒಡ್ಡಿದೆ: ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ
ಜಾನ್ ಕೆರಿ
Published On :

ಬೀಜಿಂಗ್‌: ಜಲಜನಕ ಬಾಂಬ್ ಸ್ಫೋಟ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ಜಗತ್ತಿಗೆ ಪ್ರತ್ಯಕ್ಷ್ಯ ಬೆದರಿಕೆಯೊಡ್ಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ತಿಳಿಸಿದ್ದಾರೆ.

ಉತ್ತರ ಕೊರಿಯಾ ನಡೆಸಿದ ನಾಲ್ಕನೇ ಅಣ್ವಸ್ತ್ರ ಪರೀಕ್ಷೆಯ ಕುರಿತು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನ್ ಕೆರಿ ಅವರು, ‘ಸ್ವದೇಶ ಹಾಗೂ ಸ್ನೇಹಿತರನ್ನು ಮತ್ತು ಮೈತ್ರಿ ರಾಷ್ಟ್ರಗಳ ರಕ್ಷಣೆಗಾಗಿ ಅಮೆರಿಕವು ಅಗತ್ಯ ಇರುವ ಎಲ್ಲವನ್ನೂ ಮಾಡಲಿದೆ’ ಎಂದು ವಾಂಗ್ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆರಿ ನುಡಿದರು.

ಜನವರಿ 6 ರಂದು ಉತ್ತರ ಕೊರಿಯಾ ‘ಜಲಜನಕ ಬಾಂಬ್’ ಸ್ಪೋಟ ಪರೀಕ್ಷೆ ನಡೆಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.