ಇಸಿಸ್ ನಿಂದ 300 ಮಂದಿ ಹತ್ಯೆ: 400 ಮಹಿಳೆಯರು, ಮಕ್ಕಳ ಅಪಹರಣ
ಸಿರಿಯಾ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಐಎಸ್ ಉಗ್ರ ಸಂಘಟನೆ 300 ಮಂದಿ ನಾಗರಿಕರನ್ನು...

Published On :
ಬೇರುತ್/ಲಂಡನ್: ಸಿರಿಯಾ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಐಎಸ್ ಉಗ್ರ ಸಂಘಟನೆ 300 ಮಂದಿ ನಾಗರಿಕರನ್ನು ಹತ್ಯೆ ಮಾಡಿದೆ. ಈ ಬಗ್ಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಡೇರ್ -ಅಲ್-ಜೋರ್ ಎಂಬ ಪ್ರಾಂತ್ಯದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ `ಸನಾ' ವರದಿ ಮಾಡಿದೆ.
ಅಸುನೀಗಿದವರಲ್ಲಿ ಹೆಚ್ಚಿನವರು ವೃದ್ಧರು, ಮಹಿಳೆಯರು, ಮಕ್ಕಳು ಎಂದು ಅದು ವರದಿ ಮಾಡಿದೆ. ಗುಂಡು ಹಾರಿಸಿ ಅಥವಾ ಶಿರಚ್ಛೇದ ಮಾಡಿ ಅವರನ್ನು ಕೊಂದಿದ್ದಾರೆ. ಸೈನಿಕರ ಕುಟುಂಬ ವರ್ಗದರನ್ನೇ ಹತ್ಯೆ ಮಾಡಲಾಗಿದೆ. ಆದರೆ ಬ್ರಿಟನ್ ನ ಮಾನವ ಹಕ್ಕು ಸಂಘಟನೆ ಪ್ರಕಾರ ಮೃತರ ಸಂಖ್ಯೆ 135 ಮಾತ್ರ.
400 ಮಂದಿ ಅಪಹರಣ: ಈ ಘಟನೆ ಬಳಿಕ ಐಎಸ್ ಮಹಿಳೆಯರು, ಮಕ್ಕಳು ಸೇರಿ 400 ಮಂದಿ ಸಿರಿಯಾ ನಾಗರಿಕರನ್ನು ಅಪಹರಿಸಿದೆ ಎಂದು `ಡೈಲಿ ಮೇಲ್' ವರದಿ ಮಾಡಿದೆ. ಇದೇ ವೇಳೆ, ಐಎಸ್ ಪರ ಕೆಲಸ ಮಾಡುತ್ತಿದ್ದ 100 ಮಂದಿ ಬ್ರಿಟನ್ ನಾಗರಿಕರು ಸಿರಿಯಾ, ಇರಾಕ್‍ನಲ್ಲಿ ಅಸುನೀಗಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


