ವೈರಲ್ ಆಯ್ತು ಒಮ್ಮೆಲೆ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ತಾಯಿ ಸಾಹಸದ ವಿಡಿಯೋ
ಒಂದು ಮಗುವನ್ನು ಮಲಗಿಸುವುದಕ್ಕಾಗಿಯೇ ನಮ್ಮ ತಾಯಂದಿರುವ ಹರಸಾಹಸ ಪಡುತ್ತಿದ್ದರೆ, ಬ್ರಿಟನ್ ಮೂಲದ ತಾಯಿಯೊಬ್ಬಳು ತನ್ನ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...

ಲಂಡನ್: ಒಂದು ಮಗುವನ್ನು ಮಲಗಿಸುವುದಕ್ಕಾಗಿಯೇ ನಮ್ಮ ತಾಯಂದಿರುವ ಹರಸಾಹಸ ಪಡುತ್ತಿದ್ದರೆ, ಬ್ರಿಟನ್ ಮೂಲದ ತಾಯಿಯೊಬ್ಬಳು ತನ್ನ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂಲತಃ ಕೇಂಬ್ರಿಡ್ಜ್ ನ ಕೋರಿ ಎಂಬ ಮಹಾತಾಯಿಗೆ ನಾಲ್ಕು ಮಕ್ಕಳಿದ್ದು, ಈ ಪೈಕಿ 2 ವರ್ಷದ ಒಂದು ಹೆಣ್ಣು ಮಗುವಿದ್ದರೆ, ಉಳಿದ ಮೂರು ಮಕ್ಕಳು ತ್ರಿವಳಿಗಳು. ಪ್ರತಿನಿತ್ಯ ತಾಯಿ ಮಕ್ಕಳನ್ನು ನಿದ್ರೆಗೆ ಅಣಿ ಮಾಡುವ ಸಾಹಸವನ್ನು ಕಣ್ಣಾರೆ ನೋಡುತ್ತಿದ್ದ ಆಕೆಯ ಗಂಡ ಡ್ಯಾನ್ ಗಿಬ್ಸನ್ ಒಮ್ಮೆ ಇದನ್ನು ವಿಡಿಯೋ ಮಾಡಿದ್ದಾನೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿದ್ದು, ಇದೀಗ ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆ ಲಭಿಸಿದೆ.
ಪುಟ್ಟಮಕ್ಕಳನ್ನು ಕೋಣೆಗೆ ಕರೆತರುವ ತಾಯಿ ಕೋರಿ ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುತ್ತಾಳೆ. ಈ ವೇಳೆ ಎಲ್ಲ ತುಂಟ ಮಕ್ಕಳು ಅತ್ತಿಂದಿತ್ತ ಓಡಾಡುತ್ತಲೇ ಇರುತ್ತವೆ. ಆದರೂ ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸುವ ತಾಯಿ ಕೋರಿ ಎಲ್ಲ ಮಕ್ಕಳಿಗೂ ನೈಟ್ ಡ್ರೆಸ್ ಗಳನ್ನು ಹಾಕಿ ಸುಸ್ತಾಗಿ ಹಾಸಿಗೆ ಮೇಲೆ ಮಲಗುತ್ತಾಳೆ. ಫೆಬ್ರವರಿ 4 ರಾತ್ರಿ 8.14ರಲ್ಲಿ ಈ ವಿಡಿಯೋ The Baby Gang ಎಂಬ ಖಾತೆಯಲ್ಲಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, ಕೇವಲ 6 ದಿನಗಳಲ್ಲಿ 60 ಮಿಲಿಯನ್ ಖಾತೆದಾರರು ಈ ವಿಡಿಯೋವನ್ನು ನೋಡಿದ್ದಾರೆ. ಆ ಮೂಲಕ ಈ ವಿಡಿಯೋ ವೈರಲ್ ಆಗಿದ್ದು, ಫೇಸ್ ಬುಕ್ ನಲ್ಲಿ ದಾಖಲೆ ಬರೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಡ್ಯಾನ್ ಗಿಬ್ಸನ್, ವಿಡಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದ್ದು, ಹಲವು ಪೋಷಕರು ತಮಗೂ ಇಂತಹುದೇ ಸ್ಥಿತಿ ಎದುರಾಗಿತ್ತು ಎಂದು ಹೇಳಿಕೊಂಡಿದ್ದರು. ಅಲ್ಲದೆ ಕೆಲವು ಪೋಷಕರು ಕೋರಿ ಸಂದರ್ಭವನ್ನು ನಿಯಂತ್ರಿಸಿದ ಪರಿಯನ್ನು ಹಾಡಿಹೊಗಳಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋದ ಸೀಕ್ವೆಲ್ ಕೂಡ ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ಈ ವಿಡಿಯೋ ಅಪ್ಲೋಡ್ ಮಾಡಲಾಗುತ್ತದೆ ಎಂದು ಗಿಬ್ಸನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


