ವಿದೇಶ

ಇಸಿಸ್ ಉಗ್ರ ಸಂಘಟನೆ ವಕ್ತಾರ ಅದ್ನಾನಿ ಹತ್ಯೆ

ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾದ ವಕ್ತಾರ ಉಗ್ರ ಅಬು ಮಹಮದ್ ಅಲ್-ಅದ್ನಾನಿಯನ್ನು ಅಮೆರಿಕ ಸೇನಾಪಡೆಗಳು ಅಲೆಪ್ಪೊದಲ್ಲಿ ಹೊಡೆದುರುಳಿಸಿವೆ.

ಇಸಿಸ್ ಉಗ್ರ ಸಂಘಟನೆ ವಕ್ತಾರ ಅದ್ನಾನಿ ಹತ್ಯೆ
ವಾಯುದಾಳಿಯಲ್ಲಿ ಸತ್ತ ಉಗ್ರ ಅದ್ನಾನಿ (ಚಿತ್ರ ಕೃಪೆ: ಟ್ವಿಟರ್)
Published On :

ಬೈರುತ್: ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾದ ವಕ್ತಾರ ಉಗ್ರ ಅಬು ಮಹಮದ್ ಅಲ್-ಅದ್ನಾನಿಯನ್ನು ಅಮೆರಿಕ ಸೇನಾಪಡೆಗಳು  ಅಲೆಪ್ಪೊದಲ್ಲಿ ಹೊಡೆದುರುಳಿಸಿವೆ.

ಗಲಭೆ ಪೀಡಿತ ಸಿರಿಯಾದಲ್ಲಿ ಇಸಿಸ್ ಉಗ್ರರ ಆಟಾಟೋಪ ಮುಂದುವರೆದಿರುವಂತೆಯೇ ಅಲ್ ಅರಬ್ ಪ್ರಾಂತ್ಯದಲ್ಲಿ ತನ್ನ ದಾಳಿಯನ್ನು ಮುಂದುವರೆಸಿರುವ ಅಮೆರಿಕ ನೇತೃತ್ವ ಮೈತ್ರಿ  ಪಡೆಗಳು ಮಂಗಳವಾರ ವಾಯುದಾಳಿ ನಡೆಸಿದ್ದು, ಈ ವೇಳೆ ಉಗ್ರ ಸಂಘಟನೆಯ ವಕ್ತಾರ ಎಂದು ಹೇಳಲಾಗುತ್ತಿದ್ದ ಅಬು ಮಹಮದ್ ಅಲ್-ಅದ್ನಾನಿ ಸಾವನ್ನಪ್ಪಿದ್ದಾನೆ ಎಂದು ಭದ್ರತಾ  ಪಡೆಗಳು ತಿಳಿಸಿವೆ.

ಇನ್ನು ಈ ಬಗ್ಗೆ ಸ್ವತಃ ಇಸಿಸ್ ಉಗ್ರಗಾಮಿ ಸಂಘಟನೆ ಸ್ಪಷ್ಟನೆ ನೀಡಿದ್ದು, ತನ್ನ ಅಧಿಕೃತ ಸುದ್ದಿ ವೆಬ್ ತಾಣ ಅಮಾಕ್ ನಲ್ಲಿ, ಇಸಿಸ್ ವಕ್ತಾರ ಅಬು ಮಹಮದ್ ಅಲ್-ಅದ್ನಾನಿ ಹುತಾತ್ಮರಾಗಿದ್ದು,  ಅಲೆಪ್ಪೋ ನಗರದಲ್ಲಿ ಅಮೆರಿಕದ ನಡೆಸಿದ ವಾಯುದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಉಗ್ರ ಸಂಘಟನೆ ಬರೆದುಕೊಂಡಿದೆ.

2014ರ ಜೂನ್ ತಿಂಗಳಿನಿಂದ ಇಸಿಸ್ ಉಗ್ರಗಾಮಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಅದ್ನಾನಿ, ಉಗ್ರ ಸಂಘಟನೆಯ ಪ್ರಮುಖ ನಾಯನಾಗಿದ್ದ. ಮೂಲತಃ ಸಿರಿಯಾದ ಇದ್ಲಿಬ್  ಪ್ರಾಂತ್ಯದವನಾಗಿದ್ದ ಅದ್ನಾನಿ, ಈ ಹಿಂದೆ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡುವಲ್ಲಿ ಈತ ಪ್ರಮುಖ ಪಾತ್ರ  ವಹಿಸಿದ್ದ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.