ಫ್ರಾನ್ಸ್ ಇಸ್ಲಾಂ ಸಮಾವೇಶಕ್ಕೆ ತಡೆಯೊಡ್ಡಿದ ಅರೆನಗ್ನ ಮಹಿಳಾ ಕಾರ್ಯಕರ್ತೆಯರು
ಪ್ಯಾರಿಸ್ ನಲ್ಲಿ ಇಸ್ಲಾಮಿ ಮಹಿಳೆಯರ ಬಗ್ಗೆ ನಡೆದಿದ್ದ ಮುಸ್ಲಿಂ ಸಮಾವೇಶಕ್ಕೆ ಲಗ್ಗೆಯಿಟ್ಟು ಕಾರ್ಯಕ್ರಮವನ್ನು ಹಾಳುಗೆಡವಲು ನೋಡಿದ ಇಬ್ಬರು ಅರೆನಗ್ನ ಸ್ವಯಂಘೋಷಿತ ಮಹಿಳಾ

ಪ್ಯಾರಿಸ್: ಪ್ಯಾರಿಸ್ ನಲ್ಲಿ ಇಸ್ಲಾಮಿ ಮಹಿಳೆಯರ ಬಗ್ಗೆ ನಡೆದಿದ್ದ ಮುಸ್ಲಿಂ ಸಮಾವೇಶಕ್ಕೆ ಲಗ್ಗೆಯಿಟ್ಟು ಕಾರ್ಯಕ್ರಮವನ್ನು ಹಾಳುಗೆಡವಲು ನೋಡಿದ ಇಬ್ಬರು ಅರೆನಗ್ನ ಸ್ವಯಂಘೋಷಿತ ಮಹಿಳಾ ಕಾರ್ಯಕರ್ತೆಯರನ್ನು ವೇದಿಕೆಯಿಂದ ಹೊರಗೆಳೆದು ಹಾಕಿದ ಘಟನೆಯನ್ನು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
ಶನಿವಾರ ಸಂಜೆ ಪ್ಯಾರಿಸ್ ನ ಪಾಂಟೋಯಿಸ್ ನಲ್ಲಿ ಈ ಸಮಾವೇಶ ಜರುಗುತ್ತಿತ್ತು. ಇಬ್ಬರು ಇಮಾಂ ಗಳು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗ ಈ ಮಹಿಳೆಯರು ಅಚಾನಕ್ಕಾಗಿ ವೇದಿಕೆಗೆ ನುಗ್ಗಿದ್ದಾರೆ. ಅಲ್ಜೀರಿಯಾ ಮತ್ತು ಟುನ್ಸಿಯಾ ಮೂಲದ ಈ ಮಹಿಳೆಯರು ತಮ್ಮ ಎದೆಯ ಮೇಲೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಬರೆದುಕೊಂಡಿದ್ದು, ವೇದಿಕೆ ಮೇಲೆ ಹತ್ತಿ ಮೈಕ್ ಕಸಿದು ಅವಗಳನ್ನು ಜೋರಾಗಿ ಕೂಗಿದ್ದರಿಂದ ಬೆದರಿದ ಇಮಾಂ ಗಳು ಕೆಳಗಿಳಿದಿದ್ದಾರೆ.
ನಂತರ ಭದ್ರತಾ ಸಿಬ್ಬಂದಿ ಮತ್ತಿತರು ಈ ಪ್ರತಿಭಟನೆಯನ್ನು ತಡೆಯಲು ಯಶಸ್ವಿಯಾಗಿದ್ದಾರೆ. ಈ ಮಹಿಳೆಯರಿಗೆ ಕೆಲವು ಪುರುಷರು ಹಲ್ಲೆ ಮಾಡಲು ನೋಡಿದ್ದು, ಅವರು ನಂತರ ತಪ್ಪಿಸಿಕೊಂಡಿದ್ದಾರೆ. ನಂತರ ಪೊಲೀಸರು ಮಧ್ಯೆ ಬಂದು ಆ ಮಹಿಳೆಯರನ್ನು ಕರೆದೊಯ್ದಿದ್ದಾರೆ.
ಆ ಸಮಾವೇಶದ ಆಯೋಜಕರು ಆ ಮಹಿಳೆಯರ ಮೇಲೆ ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


