ವಿದೇಶ

ಟರ್ಕಿ ಉದ್ಯಮಿಗಳಿಗೆ ಜೇಟ್ಲಿ ಆಹ್ವಾನ

ಭಾರತದಲ್ಲಿನ ತೆರಿಗೆ ನೀತಿಗಳನ್ನು ಸರಳಗೊಳಿಸಲಾಗುವು ದು ಮತ್ತು ವಹಿವಾಟು ನಡೆಸಲು ಉತ್ತಮ ಪರಿಸರ ರೂಪಿಸುವುದಾಗಿ...

ಟರ್ಕಿ ಉದ್ಯಮಿಗಳಿಗೆ ಜೇಟ್ಲಿ ಆಹ್ವಾನ
ಅರುಣ್ ಜೇಟ್ಲಿ
Published On :

ಅಂಕಾರ: ಭಾರತದಲ್ಲಿನ ತೆರಿಗೆ ನೀತಿಗಳನ್ನು ಸರಳಗೊಳಿಸಲಾಗುವು ದು ಮತ್ತು ವಹಿವಾಟು ನಡೆಸಲು ಉತ್ತಮ ಪರಿಸರ ರೂಪಿಸುವುದಾಗಿ ಟರ್ಕಿಯ ಉದ್ಯಮಿಗಳಿಗೆ ಭರವಸೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ದೇಶದಲ್ಲಿನ ಸ್ಮಾರ್ಟ್ ಸಿಟಿ, ಜವಳಿ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ.

ಜಿ-20 ದೇಶಗಳ ಹಣಕಾಸು ಸಚಿವರ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿರುವ ಅವರು ಅಲ್ಲಿನ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಭಾರತದಲ್ಲಿ ವಹಿವಾಟು ನಡೆಸಲು ಉತ್ತಮ ವಾತಾವರಣ ನಿರ್ಮಿಸುವ ವಿಚಾರದಲ್ಲಿ ನಮ್ಮ ಸರ್ಕಾರ ಗಣನೀಯ ಪ್ರಗತಿ ಸಾಧಿಸಿದೆ ಎಂದು ಹೇಳಿದರು.

ಜಿಎಸ್ ಟಿ ಮತ್ತಿತರ ಮಸೂದೆಗಳನ್ನು ಜಾರಿಗೊಳಿಸಲು ಬದ್ಧವಾಗಿದ್ದು, ಇನ್ನಷ್ಟು ನಿಯಮಗಳನ್ನು ಉದಾರೀಕರಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿದಿರುವುದು ಭಾರತಕ್ಕೆ ತುಂಬಾ ಲಾಭ ತಂದಿದೆ ಎಂದಿದ್ದಾರೆ.

ಇದರ ಒಂದಷ್ಟು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ ಮತ್ತು ಇದರಿಂದ ಹಣದುಬ್ಬರ ಪ್ರಮಾಣ ಇಳಿಮುಖ ಕಂಡಿದೆ. ಇದೇ ಸಂದರ್ಭದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.