ವಿದೇಶ

ಟ್ರಕ್ ನಿಲ್ಲಿಸಿ ಅನಾಹುತ ತಡೆದ ಮೂರು ವರ್ಷದ ಪೋರ

ಕಂಠಪೂರ್ತಿ ಕುಡಿದ ತಾಯಿ ಅಡ್ಡಾದಿಡ್ಡಿ ಟ್ರಕ್ ಚಲಾಯಿಸಿ ತನ್ನಿಬ್ಬರ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಿದ್ದಳು. ಆದರೆ...

ಟ್ರಕ್ ನಿಲ್ಲಿಸಿ ಅನಾಹುತ ತಡೆದ ಮೂರು ವರ್ಷದ ಪೋರ
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿರುವ ಟ್ರಕ್(ಚಿತ್ರ ಕೃಪೆ: ಎಡಿಎ ನ್ಯೂಸ್)
Published On :
ಲಾಸ್‌ಏಂಜಲಿಸ್‌: ಕಂಠಪೂರ್ತಿ ಕುಡಿದ ತಾಯಿ ಅಡ್ಡಾದಿಡ್ಡಿ ಟ್ರಕ್ ಚಲಾಯಿಸಿ ತನ್ನಿಬ್ಬರ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಿದ್ದಳು. ಆದರೆ, ಪುಟ್ಟ ಬಾಲಕನ ಚಾಣಾಕ್ಷತನದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಹೌದು, ಅಮೆರಿಕದ ಒಕ್ಲಾಹಾಮದಲ್ಲಿ ಈ ಘಟನೆ ನಡೆದಿದೆ. ತಲೋವಾ ಫೋಸ್ಟರ್‌ ಎಂಬ 33 ವರ್ಷದ ಮಹಿಳೆ ತನ್ನ ಇಬ್ಬರು ಅವಳಿ ಮಕ್ಕಳೊಂದಿಗೆ ಪಿಕ್ ಅಪ್ ಟ್ರಕ್ ನಲ್ಲಿ ಹೋಗುತ್ತಿದ್ದಳು. ಆಕೆ ಕಂಠಪೂರ್ತಿ ಕುಡಿದ ವಾಹನ ಚಲಾಯಿಸುತ್ತಿದ್ದಳು. ಈ ವೇಳೆ ಆಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. 
ವಾಹನದಲ್ಲೇ ಕುಳಿತಿದ್ದ ಆಕೆಯ ಮೂರು ವರ್ಷದ ಮಗು ತಾಯಿ ಬಿದ್ದಿದ್ದನ್ನು ನೋಡಿ ತಾನೇ ಸ್ಟೇರಿಂಗ್ ಹಿಡಿದು ವಾಹನವನ್ನು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿದೆ. ಟ್ರಕ್ ಕಡಿಮೆ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಈ ವೇಳೆ ಇಬ್ಬರು ಮಕ್ಕಳಿಗೂ ಯಾವುದೇ ಅಪಾಯವಾಗಿಲ್ಲ. 
ಇನ್ನು ಟ್ರಕ್‌‌ನಿಂದ ಕೆಳಗೆ ಬಿದ್ದ ಫೋಸ್ಟರ್‌‌‌ಗೆ ತೀವ್ರ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಫೋಸ್ಟರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.