ವಿವಾದ ಸೃಷ್ಟಿಸಿದ ಸಲಿಂಗಿ ಪೋಪ್ ಭೇಟಿ
ಕಳೆದ ತಿಂಗಳು ಪೋಪ್ ಅಮೆರಿಕ ಭೇಟಿ ನೀಡಿದಾಗ ಒಂದು ಅಚ್ಚರಿಯ ಘಟನೆ ನಡೆದಿದೆ. ಪೋಪ್ ತಮ್ಮ 50 ವರ್ಷ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಫೋನ್‍ನಲ್ಲಿ ಮಾತಾಡಿ, ಹಳೆಯ ನೆನಪುಗಳನ್ನೆಲ್ಲ..

ವಾಷಿಂಗ್ಟನ್: ಕಳೆದ ತಿಂಗಳು ಪೋಪ್ ಅಮೆರಿಕ ಭೇಟಿ ನೀಡಿದಾಗ ಒಂದು ಅಚ್ಚರಿಯ ಘಟನೆ ನಡೆದಿದೆ. ಪೋಪ್ ತಮ್ಮ 50 ವರ್ಷ ಹಳೆಯ ಪರಿಚಯಸ್ಥರೊಬ್ಬರೊಂದಿಗೆ ಫೋನ್‍ನಲ್ಲಿ ಮಾತಾಡಿ, ಹಳೆಯ ನೆನಪುಗಳನ್ನೆಲ್ಲ ಮರುಕಳಿಸುವಂತೆ ಮಾಡಿ ಆನಂತರ ಭೇಟಿ ನೀಡಿ ಆತನಿಗೊಂದು ಬೆಚ್ಚನೆ ಅಪ್ಪುಗೆ ನೀಡಿದ್ದಾರೆ.
ಆದರೆ ಸಿಹಿಸುದ್ದಿಯಾಗಬೇಕಿದ್ದ ಇದು ವಿವಾದಕ್ಕೆ ಎಡೆಮಾಡಿದೆ. ವಿವಾದಕ್ಕೆ ಕಾರಣ ಇಲ್ಲದಿಲ್ಲ. ಆ ಹಳೆಯಪರಿಚಯದ ವ್ಯಕ್ತಿ ಸಲಿಂಗ ಕಾಮಿ ಎಂಬುದೇ ಹಲವರ ಹುಬ್ಬೇರಲು ಕಾರಣವಾಗಿದೆ. ಯಾಯೋ ಗ್ರಾಸಿ ಎಂಬ ಸಲಿಂಗಿಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಒಂದು ಸರ್‍ಪ್ರೈಸ್ ಕರೆ. ಕರೆಮಾಡಿದವರು ಆತನನ್ನು ಅಡ್ಡ ಹೆಸರಿನಿಂದ ಕರೆದಾಗ ಯಾರಿರಬಹುದೆಂಬ ಕುತೂಹಲ. ವಿಶೇಷವೆಂದರೆ ಒಬ್ಡುಲಿಯೋ ಎಂಬ ಅಡ್ಡಹೆಸರಿನ ಗ್ರಾಸಿಗೆ ಪೋಪ್ ಫ್ರಾನ್ಸಿಸ್ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿದ್ದರು! ಆಗ ಅವರ ಹೆಸರು ಜೊರ್ಜ್ ಮಾರಿಯೋ ಬರ್ಗೊಗ್ಲಿಯೋ ಎಂದಿತ್ತು.
ತಮ್ಮನ್ನು ಗುರುತು ಹಿಡಿಯುವಂತೆ ಸತಾಯಿಸಿದ ಪೋಪ್, ಆ ನಂತರ ಅಮೆರಿಕಗೆ ಬಂದಾಗ ಭೇಟಿ ಮಾಡಿ ಒಂದು ಅಪ್ಪುಗೆ ನೀಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಅಂದ ಮಾತಿನಂತೆ ಸೆ.23 ರಂದು ಭೇಟಿ ಮಾಡಿದ್ದಾರೆ. ಸಲಿಂಗಿ ಗ್ರಾಸಿ, ಪೋಪ್‍ರನ್ನು ಭೇಟಿ ಮಾಡಲು ತನ್ನ ಬಾಯ್ ಫ್ರೆಂಡ್‍ನೊಂದಿಗೆ ಬಂದಿದ್ದಾನೆ. ಪೋಪ್ ಗ್ರಾಸಿಗೆ ಹಗ್ ನೀಡಿದರೆ, ಆತನ ಬಾಯ್ಫ್ರೆಂಡ್ ಇವಾನ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ಹದಿನೈದು ನಿಮಿಷಗಳ ಭೇಟಿ ಇದೀಗ ಭಾರಿ ಸುದ್ದಿಯಾಗಿದೆ. ಭಾರಿ ವಿವಾದಕ್ಕೂ ಗ್ರಾಸವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


