ವಿದೇಶ

ರಷ್ಯಾ ವಾಯು ದಾಳಿಗೆ 600 ಇಸಿಸ್ ಉಗ್ರರು ಸಾವು

ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ಇಸಿಸ್) ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ರಷ್ಯಾ...

ರಷ್ಯಾ ವಾಯು ದಾಳಿಗೆ 600 ಇಸಿಸ್ ಉಗ್ರರು ಸಾವು
ಸಂಗ್ರಹ ಚಿತ್ರ
Published On :
ಮಾಸ್ಕೋ: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ(ಇಸಿಸ್) ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ರಷ್ಯಾ, ವಾಯು ದಾಳಿ ನಡೆಸಿ 600 ಇಸಿಸ್ ಉಗ್ರರನ್ನು ಹತ್ಯೆ ಮಾಡಿದೆ. 
ಇಸಿಸ್ ನೆಲೆಗಳ ಮೇಲೆ ನಿರಂತರವಾಗಿ ದಾಳಿ ಸಂಘಟಿಸುತ್ತಿದೆ. ಶುಕ್ರವಾರ ನಡೆದ ದಾಳಿಯಲ್ಲಿ 600ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಜಿ ಶೋಯಿಗು ತಿಳಿಸಿದ್ದಾರೆ.
69 ಯುದ್ಧ ವಿಮಾನಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಶುಕ್ರವಾರ ಇಸಿಸ್ ನೆಲಗಳ ಮೇಲೆ ರಷ್ಯಾ 18 ಕ್ಷಿಪಣಿಗಳನ್ನು ಉಡಾಯಿಸಿದ್ದು, ಯಶಸ್ವಿಯಾಗಿ ತಲುಪಿದೆ. ಕಳೆದ ನಾಲ್ಕು ದಿನಗಳಿಂದ ರಷ್ಯಾ ಯುದ್ಧ ವಿಮಾನಗಳು 522 ಬಾರಿ ಬಾಂಬ್ ದಾಳಿ ನಡೆಸಿದೆ.  
ಶುಕ್ರವಾರ ಇಸಿಸ್  ನೆಲೆಗಳ ಮೇಲೆ ದಾಳಿ ತೀವ್ರಗೊಳಿಸಿರುವ ರಷ್ಯಾ 18 ಕ್ಷಿಪಣಿಗಳನ್ನು ಉಡಾಯಿಸಿದೆ. ಎಲ್ಲಾ ಕ್ಷಿಪಣಿಗಳು ಗುರಿಯನ್ನು ಯಶಸ್ವಿಯಾಗಿ ತಲುಪಿವೆ. ಕಳೆದ 4 ದಿನಗಳಿಂದ ರಷ್ಯಾ ಯುದ್ಧ ವಿಮಾನಗಳು 522 ಬಾರಿ ಬಾಂಬ್ ದಾಳಿ ನಡೆಸಿದೆ. ಯುದ್ಧ ಹಡಗುಗಳಿಂದ 100 ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. 
ಉಗ್ರರಿಗೆ ಆರ್ಥಿಕ ಶಕ್ತಿ ಒದಗಿಸುತ್ತಿರುವ ನೆಲೆಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ಕೇಂದ್ರೀಕರಿಸಿದೆ. ರಷ್ಯಾ 15 ತೈಲ ಸಂಗ್ರಹಾಗಾರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಜತೆಗೆ 525 ತೈಲ ಟ್ಯಾಂಕರ್​ಗಳ ಮೇಲೆ ದಾಳಿ ನಡೆಸಿದೆ. 
ಇದರ ಪರಿಣಾಮ ಉಗ್ರರು ಕಾಳ ಸಂತೆಗೆ ಪೂರೈಸುತ್ತಿದ್ದ 60 ಸಾವಿರ ಟನ್ ತೈಲವನ್ನು ತಡೆದಂತಾಗಿದೆ. ಇದರಿಂದ ಪ್ರತೀ ದಿನ ಉಗ್ರರಿಗೆ 15 ಲಕ್ಷ ಡಾಲರ್ ನಷ್ಟವುಂಟಾಗುತ್ತಿದೆ. 23 ತರಬೇತಿ ಕ್ಯಾಂಪ್​ಗಳು, ಶಸ್ತ್ರಾಸ್ತ್ರ ಉತ್ಪಾದಿಸುವ 19 ನೆಲೆಗಳು, 47 ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.