ಇಸಿಸ್ ಉಗ್ರರಿಂದ ಸಿರಿಯಾದ 25 ಸೈನಿಕರ ಹತ್ಯೆ; ವೀಡಿಯೋ ಬಹಿರಂಗ
ಇಸಿಸ್ ಮತ್ತೆ ಘರ್ಜಿಸತೊಡಗಿದ್ದು, ಸಿರಿಯಾದ 25 ಸೈನಿಕರನ್ನು ಕೊಲ್ಲುತ್ತಿರುವ ವೀಡಿಯೋ ದೃಶ್ಯವನ್ನು ಬಹಿರಂಗಗೊಳಿಸಲಾಗಿದೆ. ಸಿರಿಯಾದ...

ಸಿರಿಯಾ: ಇಸಿಸ್ ಮತ್ತೆ ಘರ್ಜಿಸತೊಡಗಿದ್ದು, ಸಿರಿಯಾದ 25 ಸೈನಿಕರನ್ನು ಕೊಲ್ಲುತ್ತಿರುವ ವೀಡಿಯೋ ದೃಶ್ಯವನ್ನು ಬಹಿರಂಗಗೊಳಿಸಲಾಗಿದೆ. ಸಿರಿಯಾದ ಪುರಾತನ ನಗರವಾದ ಪಾಲಾಮಿರಾದ ಆಂಫಿ ಥಿಯೇಟರ್ (ಚಂದ್ರಾಂಗಣ)ದಲ್ಲಿ ಸೈನಿಕರನ್ನು ಗುಂಡಿಕ್ಕಿ ಕೊಲ್ಲುವ ದೃಶ್ಯವನ್ನು ಇಸಿಸ್ ಬಹಿರಂಗಪಡಿಸಿದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರ ಮುಂದೆ ಯುವ ಉಗ್ರರು ಸೈನಿಕರನ್ನು ಕೊಲ್ಲುತ್ತಿರುವ ದೃಶ್ಯ ವೀಡಿಯೋದಲ್ಲಿ ಕಾಣುತ್ತಿದೆ.
ಆಂಫಿ ಥಿಯೇಟರ್‌ನಲ್ಲಿ ಬಂಧಿತರನ್ನು ಸಾಲಾಗಿ ಕರೆತಂದು ಮಂಡಿಯೂರಿ ಕುಳಿತುಕೊಳ್ಳುವಂತೆ ಆದೇಶಿಸುತ್ತಾರೆ. ಆಮೇಲೆ ಸಮವಸ್ತ್ರಧಾರಿ ಉಗ್ರರು ಬರುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಸೈನಿಕರನ್ನು ಹತ್ಯೆಗೈಯ್ಯುವುದನ್ನು ನೋಡಲು ಥಿಯೇಟರ್‌ನಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಜನರು ಕುಳಿತಿದ್ದಾರೆ. ಉಗ್ರರು ಇಸಿಸ್ ಪತಾಕೆಯನ್ನು ಬೀಸಿ ಆಮೇಲೆ ಸೈನಿಕರನ್ನು ಹತ್ಯೆಗೈದಿದ್ದಾರೆ. ಬಂಧಿತರ ಮುಂದೆ ನಿಂತ ಉಗ್ರರಿಗೆ ಅವರ ಮುಖಂಡ ಆದೇಶ ನೀಡಿದಾಕ್ಷಣ ಒಬ್ಬೊಬ್ಬರೇ ಸೈನಿಕರನ್ನು ಕೊಲ್ಲುವ ದೃಶ್ಯಗಳು ವೀಡಿಯೋದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


