ಬೀಜಿಂಗ್ ನ ಶೌಚಾಲಯದಲ್ಲಿ ಟಿವಿ, ವೈಫೈ ಮತ್ತು ಎಟಿಎಂ ಸೌಲಭ್ಯ
ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ...

ಬೀಜಿಂಗ್: ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ ಸೌಲಭ್ಯವಿದೆ. ಪರ್ಸನಲ್ ಟಿವಿ ಇದೆ. ಅಷ್ಟೇ ಅಲ್ಲ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳೂ ಇವೆ ಇದು ಅಚ್ಚರಿ ನಿಜ.
ಫ್ಯಾಂಗ್ ಶಾನ್‌ನ ಫ್ಯೂಕಿಯಾನ್ ಸ್ಕ್ವೇರ್‌ನಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಎಲ್ಲಾ ಸೌಲಭ್ಯಗಳು ಇವೆ. ಜತೆಗೆ ಸದಾ ಇಂಪಾದ ಸಂಗೀತವೂ ಕೇಳಬಹುದು. ಶೌಚಾಲಯದ ಕಿಟಕಿಗಳಲ್ಲಿ ಸಾಲಾಗಿ ಅಲೋವೆರಾ ಗಿಡಗಳು! ಟಾಯ್ಲೆಟ್ಟಲ್ಲಿ ಇದೆಲ್ಲ ಬೇಕಾ ಅಂತೀರಾ? ಚೀನಾದಲ್ಲೂ ಹಲವರು ಹೀಗೆಯೇ ಪ್ರಶ್ನಿಸಿದ್ದಾರೆ. ಆದರೆ ಪರಿಸರ ನೈರ್ಮಲ್ಯಕ್ಕಾಗಿ ಈ ಆಕರ್ಷಣೆ ಮತ್ತು ಸೌಲಭ್ಯ ತರಲಾಗಿದೆಯಂತೆ.
ಸದ್ಯದಲ್ಲೇ ಇನ್ನೂ ೫೭ ಸಾವಿರ ಟಾಯ್ಲೆಟ್‌ಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಚೀನಾ ಸರ್ಕಾರ ಘೋಷಿಸಿದೆ. ಚೀನಾದ ಹಿರಿಯ ನಾಗರಿಕರು, ಇದೊಂದು ವ್ಯರ್ಥ ಕಸರತ್ತು, ಟ್ಯಾಕ್ಸ್ ಹೊರೆ ಎಂದೆಲ್ಲ ದೂಷಿಸಿದ್ದರೆ, ಯುವಜನತೆ ಈ ನಡೆಯನ್ನು ಸ್ವಾಗತಿಸಿದೆ. ಗಮನಾರ್ಹ ಸಂಗತಿಯೆಂದರೆ ಈ ಎಲ್ಲ ಸೌಲಭ್ಯಗಳಿರುವುದು ಪುರುಷರ ಶೌಚಾಲಯಕ್ಕೆ ಮಾತ್ರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


