ಇಸಿಸ್ ವಿರುದ್ಧ ಹೋರಾಟಕ್ಕೆ ಕ್ರಿಶ್ಚಿಯನ್ ಮಹಿಳಾ ಪಡೆ ಸಜ್ಜು
ತನ್ನ ಇಬ್ಬರು ಮಕ್ಕಳನ್ನು ಹಾಗೂ ಹೇರ್‍ಡ್ರೆಸ್ಸರ್ ಉದ್ಯೋಗವನ್ನು ತೊರೆದು ಬಂದದ್ದಕ್ಕೆ ಬ್ಯಾಬಿಲೋನಿಯಾಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ...

Published On :
ಹಸಕೆ(ಸಿರಿಯಾ): ತನ್ನ ಇಬ್ಬರು ಮಕ್ಕಳನ್ನು ಹಾಗೂ ಹೇರ್‍ಡ್ರೆಸ್ಸರ್ ಉದ್ಯೋಗವನ್ನು ತೊರೆದು ಬಂದದ್ದಕ್ಕೆ ಬ್ಯಾಬಿಲೋನಿಯಾಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ಏಕೆಂದರೆ, ತನ್ನ ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು, ಸುರಕ್ಷಿತ ನಾಳೆಗಳನ್ನು ಅವರಿಗೆ ನೀಡಲು ತಾನು ಈ ತ್ಯಾಗ ಮಾಡುವುದು ಅನಿವಾರ್ಯ ಎಂದೇ ಆಕೆ ನಂಬಿದ್ದಾಳೆ.
ಹೌದು, ಸಿರಿಯಾದ ಅಮಾನುಷ ಐಎಸ್ ಉಗ್ರರ ವಿರುದ್ಧ ಸೆಣೆಸುತ್ತಿರುವ `ಟೈಗ್ರಿಸ್-ಯುಪ್ರೆಟಿಸ್ ನಡುವಿನ ಪ್ರದೇಶದ ಮಹಿಳಾ ರಕ್ಷಣಾ ಪಡೆ' ಎಂಬ ಕ್ರಿಶ್ಚಿಯನ್ ಮಹಿಳಾ ಪಡೆಯ ಸದಸ್ಯೆಯಾದ ಬ್ಯಾಬಿಲೋನಿಯಾಳಂತೆಯೆೀ ಹಲವು ಕ್ರಿಶ್ಚಿಯನ್ ಮಹಿಳೆಯರು ಕೂಡ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಸ್ತ್ರ ಕೈಗೆತ್ತಿಕೊಂಡಿದ್ದಾರೆ.
ಈವರೆಗೆ ತರಬೇತಾದ ಸುಮಾರು 50 ಮಹಿಳಾ ಹೋರಾಟಗಾರರನ್ನು ಹೊಂದಿರುವ ಈ ಹೊಸ ಪಡೆಯ ತರಬೇತಿ ಶಿಬಿರ ಸದ್ಯ ಅಲ್ ಖ್ವತಾನಿಯಾದಲ್ಲಿದೆ. ಆಗಸ್ಟ್‍ನಲ್ಲಿ ಈ ತಂಡದ ಮೊದಲ ನೇಮಕಾತಿ ನಡೆದಿದ್ದು, ಇದೀಗ ನಿರಂತರ ತರಬೇತಿ ಮುಂದುವರಿದಿದೆ.
ಜಾಂಬಿಯಾ ಇಸ್ಲಾಮಿಕ್ ಸ್ಟೇಟ್: ಪಶ್ಚಿಮ ಆಫ್ರಿಕಾದಲ್ಲಿನ ಪುಟ್ಟ ದೇಶ ಜಾಂಬಿಯಾವನ್ನು ಇಸ್ಲಾಮಿಕ್ ಸ್ಟೇಟ್ ಎಂದು ಅಲ್ಲಿನ ಅಧ್ಯಕ್ಷ ಯಾಹ್ಯಾ ಜಮ್ಮೇಹ್ ಭಾನುವಾರ ಘೋಷಿಸಿದ್ದಾರೆ. ಜತೆಗೆ, ನಮ್ಮದು ಇಸ್ಲಾಮಿಕ್ ಸ್ಟೇಟ್ ಆದರೂ, ಅಲ್ಪಸಂಖ್ಯಾತರೆಲ್ಲರಿಗೂ ಸಮಾನ ಗೌರವ ನೀಡಲಾಗುವುದು ಎಂದೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


